ಬಜ್ಪೆಯಲ್ಲಿ ಪ್ರವಾದಿ ಸಂದೇಶ ಕಾರ್ಯಕ್ರಮ
Update: 2017-12-18 21:10 IST
ಮಂಗಳೂರು, ಡಿ.18: ಪಿಎಫ್‌ಐ ಕಾವೂರು ವಲಯ ಸಮಿತಿ ವತಿಯಿಂದ ಶಹೀದ್ ಮುಸ್ತಫಾ ಕಾವೂರು ವೇದಿಕೆಯಲ್ಲಿ ‘ಪ್ರವಾದಿ ಸಂದೇಶ’ ಕಾರ್ಯಕ್ರಮ ಇತ್ತೀಚೆಗೆ ಜರಗಿತು.
ಹಾಫಿಝ್ ಅಫ್ಸಲ್ ಖಾಸಿಮಿ ಕೊಲ್ಲಂ ಮುಖ್ಯಭಾಷಣ ಮಾಡಿದರು. ಪಿಎಫ್‌ಐ ವಲಯಾಧ್ಯಕ್ಷ ನೌಶಾದ್ ಕಾವೂರು ಅಧ್ಯಕ್ಷತೆ ವಹಿಸಿದ್ದರು. ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಜಾಫರ್ ಸಾದಿಕ್ ಫೈಝಿ ಪ್ರಾಸ್ತಾವಿಕ ಭಾಷಣ ಮಾಡಿದರು.
ವೇದಿಕೆಯಲ್ಲಿ ಪಿಎಫ್‌ಐ ಜಿಲ್ಲಾಧ್ಯಕ್ಷ ನವಾಝ್ ಉಳ್ಳಾಲ, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ, ಸ್ಥಳೀಯ ಮಸೀದಿಗಳ ಅಧ್ಯಕ್ಷರಾದ ಕೆ.ಎಂ. ಶರೀಫ್, ಕೆ. ಖಾದರ್, ಉಮರುಲ್ ಫಾರೂಕ್, ಸ್ಥಳೀಯ ಮುಖಂಡರಾದ ಜಲೀಲ್ ಕೃಷ್ಣಾಪುರ, ಹನೀಫ್ ಕಾವೂರು, ಸಿರಾಜ್ ಕಾವೂರು, ರಫೀಕ್ ಕೂಳೂರು ಉಪಸ್ಥಿತರಿದ್ದರು.
ನವಾಝ್ ಕಾವೂರು ಸ್ವಾಗತಿಸಿದರು. ನಿಸಾರ್ ಕಾವೂರು ವಂದಿಸಿದರು. ಜಮಾಲ್ ಜೋಕಟ್ಟೆ ಕಾರ್ಯಕ್ರಮ ನಿರೂಪಿಸಿದರು.