×
Ad

ಡಿ. 20: ‘ರೋಟರಿ ಬೈಕಂಪಾಡಿ ಕಲಾ ವೇದಿಕೆ’ ಉದ್ಘಾಟನೆ

Update: 2017-12-18 22:13 IST

ಮಂಗಳೂರು, ಡಿ.18: ಕುಳಾಯಿ ಕೋಡಿಕೆರೆಯ ಪೆರ್ಮುದೆ ಹಿಂದೂ ಅನುದಾನಿತ ಶಾಲೆಗೆ ಬೈಕಂಪಾಡಿ ರೋಟರಿ ಕ್ಲಬ್ ವತಿಯಿಂದ ಸುಮಾರು 8.5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ‘ರೋಟರಿ ಬೈಕಂಪಾಡಿ ಕಲಾ ವೇದಿಕೆ’ಯು ಡಿ.20ರಂದು ಮಧ್ಯಾಹ್ನ 12ಕ್ಕೆ ಉದ್ಘಾಟನೆಗೊಳ್ಳಲಿದೆ ಎಂದು ಕ್ಲಬ್‌ನ ಮಾಜಿ ಅಧ್ಯಕ್ಷ ಕಿರಣ್‌ಪ್ರಸಾದ್ ರೈ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹಲವು ವರ್ಷಗಳಿಂದ ಸಾಮಾಜಿಕ ಕ್ಷೇತ್ರದಲ್ಲಿ ದುಡಿಯುತ್ತಿರುವ ಬೈಕಂಪಾಡಿ ರೋಟರಿ ಕ್ಲಬ್ ಹತ್ತು ಹಲವು ಸಾಮಾಜಿಕ ಕಾರ್ಯಗಳ ಮೂಲಕ ಜನಮನ್ನಣೆ ಗಳಿಸಿದೆ. ಶಾಲಾ ಮಕ್ಕಳಿಗೆ ವಿವಿಧ ಸಲಕರಣೆ ವಿತರಣೆ, ಸಾಲೆತ್ತೂರಿನಲ್ಲಿ 2 ಮನೆಗಳಿಗೆ ಸೌರ ವಿದ್ಯುತ್ ಅಳವಡಿಕೆ, ಪಂಜಿಮೊಗರಿನಲ್ಲಿ 4.5 ಲಕ್ಷ ರೂ.ವೆಚ್ಚದಲ್ಲಿ ಮನೆ ನಿರ್ಮಾಣ ಮೊದಲಾದ ಸಮಾಜಮುಖಿ ಕಾರ್ಯಗಳನ್ನು ನಿರ್ವಹಿಸಿದೆ. 125 ವರ್ಷಗಳ ಹಳೆಯದಾದ ಪೆರ್ಮುದೆ ಶಾಲೆಗೆ ಶಾಲಾ ಕೊಠಡಿಯ ಅಗತ್ಯದ ಜತೆಗೆ ಕಲಾವೇದಿಕೆಯ ಅವಶ್ಯಕತೆಯ ಹಿನ್ನೆಲೆಯಲ್ಲಿ ಪ್ರಸ್ತುತ ಅದನ್ನು ನಿರ್ಮಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕ್ಲಬ್ ಅಧ್ಯಕ್ಷ ಜಯಕುಮಾರ್, ಕಾರ್ಯದರ್ಶಿ ಪ್ರಕಾಶ್ ಪಿ.ವಿ, ನಿಯೋಜಿತ ಅಧ್ಯಕ್ಷ ಶ್ರೀಕಾಂತ್, ಮಾಜಿ ಅಧ್ಯಕ್ಷ ಗಂಗಾಧರ ಕುಳಾಯಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News