ಸಿಪಿಎಂ ದ.ಕ. ಜಿಲ್ಲಾ ಕಾರ್ಯದರ್ಶಿಯಾಗಿ ವಸಂತ ಆಚಾರಿ ಪುನರಾಯ್ಕೆ

Update: 2017-12-18 16:48 GMT

ಮಂಗಳೂರು, ಡಿ.18: ಕೋಮುವಾದ ಮತ್ತು ನವ ಉದಾರೀಕರಣ ನೀತಿಗಳ ವಿರುದ್ಧ ಪ್ರಧಾನ ರಾಜಕೀಯ ಶಕ್ತಿಯಾಗಿರುವ ಸಿಪಿಎಂ ಪಕ್ಷದ ದ.ಕ.ಜಿಲ್ಲಾ ಸಮಿತಿ ಕಾರ್ಯದರ್ಶಿಯಾಗಿ ವಸಂತ ಆಚಾರಿ ಅವರನ್ನು ನಗರದ ಬೋಳಾರದಲ್ಲಿ ನಡೆದ ಪಕ್ಷದ ದ.ಕ. ಜಿಲ್ಲಾ ಸಮ್ಮೇಳನವು ಪನರಾಯ್ಕೆ ಮಾಡಿದೆ.

ವಿದ್ಯಾರ್ಥಿ ಚಳುವಳಿ, ಯುವಜನ ಸಂಘಟನೆಯಲ್ಲಿ ನಾಯಕರಾಗಿ ಮುಂದೆ ಬಂದಿರುವ ವಸಂತ ಆಚಾರಿ ನ್ಯಾಯವಾದಿಯೂ ಆಗಿದ್ದು, ಕಾರ್ಮಿಕ ಸಂಘಟನೆಗಳಲ್ಲೂ ನಾಯಕತ್ವ ವಹಿಸುತ್ತಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ ಪಕ್ಷದ ಹಲವಾರು ಚಳುವಳಿಗಳನ್ನು ಸಂಘಟಿಸಿದ್ದಾರೆ. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಭಾಗವಹಿಸಿದ್ದ ‘ಕರಾವಳಿ ಸೌಹಾರ್ದ ರ್ಯಾಲಿ’ಯನ್ನು ವಿಫಲಗೊಳಿಸಲು ಕೋಮುವಾದಿ ಶಕ್ತಿಗಳು ಪ್ರಯತ್ನಿಸುತ್ತಿದ್ದಾಗ ರ್ಯಾಲಿಯನ್ನು ಅತ್ಯಂತ ಯಶಸ್ವಿಗೊಳಿಸುವಲ್ಲಿ ವಸಂತ ಆಚಾರಿ ಅವರ ಪಾತ್ರ ಪ್ರಮುಖವಾಗಿದೆ.

ಬೋಳಾರದ ಕಾಂ. ಪ್ರಸನ್ನಕುಮಾರ್ ನಗರದ ಕಾಂ.ಪೂವಪ್ಪಸಾಲ್ಯಾನ್ ಸಭಾಂಗಣದ ಕಾಂ. ಅಬ್ರಹಾಂ ಕರ್ಕಡ ವೇದಿಕೆಯಲ್ಲಿ ನಡೆದ ಸಿಪಿಎಂ ದ.ಕ ಜಿಲ್ಲಾ ಸಮ್ಮೇಳನವು 21 ಮಂದಿಯ ನೂತನ ಜಿಲ್ಲಾ ಸಮಿತಿಯನ್ನು ಆಯ್ಕೆ ಮಾಡಿದೆ. ಅವರಲ್ಲಿ ಕೆ.ಆರ್.ಶ್ರೀಯಾನ್, ಜೆ. ಬಾಲಕೃಷ್ಣ ಶೆಟ್ಟಿ, ಕೆ.ಯಾದವ ಶೆಟ್ಟಿ, ಸುನಿಲ್ ಕುಮಾರ್ ಬಜಾಲ್, ಯು.ಬಿ. ಲೋಕಯ್ಯ, ಕೃಷ್ಣಪ್ಪಸಾಲ್ಯಾನ್, ಮುನೀರ್ ಕಾಟಿಪಳ್ಳ, ವಾಸುದೇವ ಉಚ್ಚಿಲ ಅವರನ್ನು ಒಳಗೊಂಡ ಕಾರ್ಯದರ್ಶಿ ಮಂಡಳಿಯನ್ನೂ ಆಯ್ಕೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News