ಕರಾವಳಿ ಯುವ ಉತ್ಸವ ಯುವಜನರಿಗೆ ಉತ್ತಮ ಅವಕಾಶ

Update: 2017-12-18 16:49 GMT

ಮಂಗಳೂರು, ಡಿ.18: ಯುವಜನತೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಆರೋಗ್ಯಕರ ಮನಸ್ಸನ್ನು ಬೆಳೆಸಿಕೊಳ್ಳಲು ಸಾಧ್ಯ. ಕರಾವಳಿ ಯುವ ಉತ್ಸವವು ಇದಕ್ಕೆ ಅತ್ಯಂತ ಸೂಕ್ತ ಅವಕಾಶವಾಗಿದೆ ಎಂದು ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತೆ ಹಾಗು ದ.ಕ.ಜಿಲ್ಲಾ ಕರಾವಳಿ ಯುವ ಉತ್ಸವ ಉಪಸಮಿತಿ ಅಧ್ಯಕ್ಷ ಪ್ರಮೀಳಾ ಎಂ.ಕೆ. ನುಡಿದರು.

ಪುರಭವನದಲ್ಲಿ ಕರಾವಳಿ ಉತ್ಸವದ ಅಂಗವಾಗಿ ನಡೆದ ಕರಾವಳಿ ಯುವ ಉತ್ಸವ ಪೂರ್ವ ಪ್ರಥಮ ಸುತ್ತಿನ ಅಡಿಷನ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಯುವ ಉತ್ಸವದ ಕಾರ್ಯಾಧ್ಯಕ್ಷ ಹಾಗೂ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಜಶೇಖರ್ ಹೆಬ್ಬಾರ್ ಸಿ. ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯ ವಿಶೇಷಾಧಿಕಾರಿ ಶ್ರೀಧರ್ ಮಣಿಯಾಣಿ,ಕಾರ್ಯಕ್ರಮ ಸಂಯೋಜಕ ಶೇಷಪ್ಪ, ಡಾ.ನಾಗವೇಣಿ ಮಂಚಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶಾಸ್ತ್ರೀಯ ನೃತ್ಯ ವೈಯುಕ್ತಿಕ ಹಾಗೂ ಸಮೂಹ, ಪಾಶ್ಚಾತ್ಯ ನೃತ್ಯ ವೈಯುಕ್ತಿಕ ಹಾಗೂ ಸಮೂಹ, ಜನಪದ ಗೀತೆ ಸಮೂಹ, ಯಕ್ಷಯುಗಳ ನೃತ್ಯ, ಕಿರುಪ್ರಹಸನ, ಏಕಾಪಾತ್ರಾಭಿನಯ, ಮೂಕಾಭಿನಯ ಹಾಗೂ ಪಾರಂಪರಿಕ ವಸ್ತ್ರ ಪ್ಯಾಶನ್ ಪ್ರದರ್ಶನ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News