×
Ad

ಡಿ.19: ಸಂಯುಕ್ತ ರಾಷ್ಟ್ರ ಮಂಡಳಿಯಿಂದ ಕರಡು ನಿರ್ಣಯಕ್ಕೆ ಮತ

Update: 2017-12-18 23:15 IST

ನ್ಯೂಯಾರ್ಕ್, ಡಿ.18: ಜೆರುಸಲೇಂ ಅನ್ನು ಇಸ್ರೇಲ್‌ನ ರಾಜಧಾನಿಯಾಗಿ ಗುರುತಿಸಬೇಕು ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರವನ್ನು ವಿರೋಧಿಸುವ ಕರಡು ನಿರ್ಣಯಕ್ಕೆ ಸಂಯುಕ್ತ ರಾಷ್ಟ್ರ ಭದ್ರತಾ ಮಂಡಳಿ ಡಿ.19ರಂದು ಮತ ಚಲಾಯಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಮೆರಿಕಾದಿಂದ ವೀಟೊಗೆ ಒಳಗಾಗಬಹುದಾಂತಹ ಕ್ರಮಗಳನ್ನು ಪ್ರಸ್ತಾಪಿಸಿರುವ ಈಜಿಪ್ಟ್ ಸೋಮವಾರದಂದು ಮತದಾನ ನಡೆಸಲು ಬಯಸಿತ್ತು. ಅಂತಾರಾಷ್ಟ್ರೀಯ ಒಮ್ಮತವನ್ನು ಮುರಿದ ಟ್ರಂಪ್ ಈ ತಿಂಗಳು ಜೆರುಸಲೇಂ ಅನ್ನು ಇಸ್ರೇಲ್‌ನ ರಾಜಧಾನಿಯಾಗಿ ಗುರುತಿಸಿ ಅಮೆರಿಕ ರಾಯಭಾರ ಕಚೇರಿಯನ್ನು ಟೆಲ್ ಅವಿವ್‌ನಿಂದ ನೂತನ ರಾಜಧಾನಿಗೆ ವರ್ಗಾಯಿಸುವುದಾಗಿ ಘೋಷಿಸಿದ್ದರು. ಈ ನಿರ್ಧಾರಕ್ಕೆ ವ್ಯಾಪಕ ಖಂಡನೆಗಳು ವ್ಯಕ್ತವಾಗಿ ಪ್ರತಿಭಟನೆಗಳೂ ನಡೆದವು.

ಅಮೆರಿಕಾ ಉಪರಾಷ್ಟ್ರಪತಿ ಮೈಕ್ ಫೆನ್ಸ್ ಬುಧವಾರದಂದು ಜೆರುಸಲೇಂಗೆ ಭೇಟಿ ನೀಡಲಿದ್ದಾರೆ. 1967ರಲ್ಲಿ ಮಧ್ಯಪ್ರಾಚ್ಯ ಯುದ್ಧದ ವೇಳೆ ಜೆರುಸಲೇಂನ ಪೂರ್ವದ ಭಾಗವನ್ನು ವಶಪಡಿಸಿಕೊಂಡ ಇಸ್ರೇಲ್ ಇಡೀ ಜೆರುಸಲೇಂ ನಗರವನ್ನು ತನ್ನ ರಾಜಧಾನಿಯಾಗಿ ಪರಿಗಣಿಸುತ್ತದೆ. ಆದರೆ ಪ್ಯಾಲೆಸ್ತೀನ್ ಜೆರುಸಲೇಂನ ಪೂರ್ವ ಭಾಗವನ್ನು ತನ್ನ ಭವಿಷ್ಯದ ರಾಜಧಾನಿಯಾಗಿ ನೋಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News