ಎಸ್‌ಒಸಿಯ ನಿರ್ದೇಶಕಿಯಾಗಿ ಪದ್ಮಾರಾಣಿ ಮಣಿಪಾಲ
Update: 2017-12-19 22:29 IST
ಉಡುಪಿ, ಡಿ.19: ಮಣಿಪಾಲದ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ) ಆಡಳಿತಕ್ಕೊಳಪಟ್ಟ ಮಣಿಪಾಲ ಸ್ಕೂಲ್ ಆಫ್ ಕಮ್ಯುನಿಕೇಷನ್ (ಎಸ್‌ಒಸಿ) ನಿರ್ದೇಶಕಿಯಾಗಿ ಡಾ.ಪದ್ಮಾರಾಣಿ ನೇಮಕಗೊಂಡಿದ್ದಾರೆ.
ಪ್ರಸ್ತುತ ಎಸ್‌ಒಸಿಯ ಜಂಟಿ ನಿರ್ದೇಶಕಿ ಹಾಗೂ ಮಾಧ್ಯಮ ಸಂಶೋಧನಾ ಕೇಂದ್ರದ ಸಮನ್ವಯಕಾರರಾಗಿರುವ ಇವರಿಗೆ ಭಡ್ತಿ ನೀಡಲಾಗಿದೆ. ದಿಲ್ಲಿ ವಿವಿಯಿಂದ ಪದವಿ, ಜೆಎನ್‌ಯುನಿಂದ ಸ್ನಾತಕೋತ್ತರ ಪದವಿ ಹಾಗೂ ಡಾಕ್ಟರೇಟ್ ಪದವಿ ಪಡೆದಿರುವ ಡಾ.ಪದ್ಮಾರಾಣಿ, 2010ರಲ್ಲಿ ಎಸ್‌ಒಸಿಯನ್ನು ರೀಡರ್ ಆಗಿ ಸೇರಿದ್ದು, ಇದಕ್ಕೆ ಮೊದಲು ಚೆನ್ನೈನ ವೈಷ್ಣವ ಮಹಿಳಾ ಕಾಲೇಜಿನಲ್ಲಿ ಕಮ್ಯುನಿಕೇನ್ ವಿಭಾಗದ ಮುಖ್ಯಸ್ಥೆಯಾಗಿದ್ದರು.
ಸಂಸ್ಥೆಯಲ್ಲಿ ಡಾಕ್ಟರೇಟ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತಿದ್ದ ಡಾ.ಪದ್ಮಾರಾಣಿ, ಎಸ್‌ಒಸಿಯನ್ನು ದೇಶದ ಅಗ್ರಗಣ್ಯ ಸಂವಹನ ಹಾಗೂ ಮಾಧ್ಯಮ ವಿದ್ಯಾಸಂಸ್ಥೆಯಾಗಿ ಅಭಿವೃದ್ಧಿ ಪಡಿಸುವ ಗುರಿಯನ್ನು ಹೊಂದಿರುವುದಾಗಿ ತಿಳಿಸಿದ್ದಾರೆ.