ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ
Update: 2017-12-19 22:44 IST
ಉಡುಪಿ, ಡಿ.19: ವೈಯಕ್ತಿಕ ಕಾರಣದಿಂದ ಮನನೊಂದ ಸಂತೆಕಟ್ಟೆಯ ಬಡಗು ನಯಂಪಳ್ಳಿ ನಿವಾಸಿ ಜಯಾನಂದ ನಾಯ್ಕ್(61) ಎಂಬವರು ಡಿ.19 ರಂದು ಬೆಳಿಗ್ಗೆ ಸಮೀಪದ ಗುಡ್ಡೆಯಲ್ಲಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ: ಮನೆಯಿಂದ ಹೊರಗೆ ಹೋಗಿ ನಾಪತ್ತೆಯಾಗಿದ್ದ ಹಿರ್ಗಾನ ಗ್ರಾಮದ ಕುಂದೇಶ್ವರ ಪೀಂದ್ರಬೆಟ್ಟು ನಿವಾಸಿ ರತ್ನವರ್ಮ ಜೈನ್(50) ಎಂಬ ವರು ಡಿ.16ರಿಂದ 18ರ ಮಧ್ಯಾವಧಿಯಲ್ಲಿ ವೈಯಕ್ತಿಕ ಕಾರಣದಿಂದ ಜೀವನ ದಲ್ಲಿ ಜುಗುಪ್ಸೆಗೊಂಡು ಹಿರ್ಗಾನ ಗ್ರಾಮದ ಹರಿಯಪನ ಕೆರೆ ಎಂಬಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.