ಭವಿಷ್ಯ ರೂಪಿಸುವಲ್ಲಿ ಕ್ರೀಡೆ ಸಹಕಾರಿ: ಶಾಸಕ ಮೊಯ್ದಿನ್ ಬಾವ
ಸುರತ್ಕಲ್, ಡಿ. 19: ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಕ್ರೀಡೆ ಸಹಕಾರಿಯಾಗಿದೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎ. ಮೊಯ್ದಿನ್ ಬಾವಾ ಹೇಳಿದರು.
ಅವರು ಅಲ್ ಬದ್ರಿಯಾ ಸಂಯುಕ್ತ ಪದವಿ ಪೂರ್ವ ಕಾಲೇಜು ಹಾಗೂ ಅಲ್ ಬದ್ರಿಯಾ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಅಲ್ ಬದ್ರಿಯಾ ಸಂಸ್ಥೆಯ ವಿದ್ಯಾರ್ಥಿಗಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದು ಸಂಸ್ಥೆಯು ಉತತಿಮ ಶೈಕ್ಷಣಿಕ ವಾತಾವರಣವನ್ನು ಹೊಂದಿರುವುದಕ್ಕೆ ಸಂತೋಷವಾಗುತ್ತಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿತಿ ಮಾತನಾಡಿದ ಅಲ್ ಬದ್ರಿಯಾ ಎಜ್ಯುಕೇಶನಲ್ ಅಸೋಸಿಯೇಶನ್‌ನ ಅಧ್ಯಕ್ಷ ಅಬೂಬಕರ್ ಕೃಷ್ಣಾಪುರ ಅವರು, ವಿದ್ಯಾರ್ಥಿಗಳ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವನ್ನು ಸಂಸ್ಥೆಯು ಮಾಡುತ್ತಿದ್ದು, ಅನೇಕ ವಿದ್ಯಾರ್ಥಿಗಳು ವಿಭಾಗ ಹಾಗೂ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಕಾರ್ಪೊರೇಟರ್‌ಗಳಾದ ತಿಲಕ್‌ರಾಜ್, ಅಯಾಝ್ ಕೃಷ್ಣಾಪುರ, ಪ್ರತಿಭಾ ಕುಳಾಯಿ ಹಾಗೂ ಎಚ್‌ಎನ್‌ಜಿಸಿ ಸಂಸ್ಥೆಯ ನಿರ್ದೇಶಕ ಮನ್ಸೂರ್, ಬದ್ರಿಯಾ ಜುಮಾ ಮಸೀದಿಯ ಉಪಾಧ್ಯಕ್ಷ ಅಬ್ದುಲ್ ಜಲೀಲ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಹಾಜಿ.ಬಿ. ಎಂ. ಹುಸೇನ್, ಸಂಸ್ಥೆಯ ಉಪಾಧ್ಯಕ್ಷ ಅಬ್ದುಲ್ ಖಾದರ್ ಬೊಂಬಾ, ಸಂಚಾಲಕ ಬಿ.ಎ. ನಝೀರ್, ಕಾರ್ಯದರ್ಶಿ ಬಿ.ಕೆ. ಹಮೀದ್, ಜೊತೆ ಕಾರ್ಯದರ್ಶಿ ಝಾಕಿರ್ ಹುಸೇನ್, ಕೋಶಾಧಿಕಾರಿ ಟಿ.ಎಂ. ಮುಬಾರಕ್, ಪ್ರಾಂಶುಪಾಲ ಸಂದೀಪ್ ಆಚಾರ್ಯ, ಮುಖ್ಯ ಶಿಕ್ಷಕ ಸತೀಶ್ ಎನ್., ಅಬೂಸಾಲಿ, ಅಶ್ರಫ್ ಉಪಸ್ಥಿತರಿದ್ದರು.
ಕೃಷ್ಣಾಪುರದ ಖಾಝಿ ಅಲ್‌ಹಾಜ್ ಇ.ಕೆ. ಇಬ್ರಾಹೀಂ ಮುಸ್ಲಿಯಾರ್ ದುವಾ ನೆರವೇರಿಸಿದರು. ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ಹಾಗೂ ವರ್ಣರಂಜಿತ ಪ್ರದರ್ಶನಗಳನ್ನು ಏರ್ಪಡಿಸಲಾಗಿತ್ತು.
ಸಹಶಿಕ್ಷಕಿ ಪ್ರಾರ್ಥನಾ ಸ್ವಾಗತಿಸಿದರು. ಜ್ಯೋತಿಷ್ ಕುಮಾರ್ ವಂದಿಸಿದರು. ಪ್ರಮೀಳಾ ಹಾಗೂ ಝೀನತ್ ಕಾರ್ಯಕ್ರಮ ನಿರೂಪಿಸಿದರು.