ಎಸ್ಸೆಸ್ಸೆಫ್ ಮೋಂಟುಗೋಳಿ ಸೆಕ್ಟರ್ ಪ್ರತಿಭೋತ್ಸವ: ಮರಿಕ್ಕಳ ಶಾಖೆ ಚಾಂಪಿಯನ್

Update: 2017-12-20 05:01 GMT

ಕೊಣಾಜೆ, ಡಿ.20: ಎಸ್ಸೆಸ್ಸೆಫ್ ಮೋಂಟುಗೋಳಿ ಸೆಕ್ಟರ್ ವತಿಯಿಂದ ಸೆಕ್ಟರ್ ಮಟ್ಟದ ಪ್ರತಿಭೋತ್ಸವವು ಎಸ್ಸೆಸ್ಸೆಫ್ ಮೋಂಟುಗೋಳಿ ಸೆಕ್ಟರ್ ಅಧ್ಯಕ್ಷ ಮನ್ಸೂರು ಹಿಮಮಿ ಅಧ್ಯಕ್ಷತೆಯಲ್ಲಿ ಪಡಿಕ್ಕಲ್ ಮಸ್ಜಿದ್ ವಠಾರದಲ್ಲಿ ನಡೆಯಿತು.

ಎಸ್.ಜೆ.ಎಂ. ಮಂಗಳೂರು ಜಿಲ್ಲೆ ಅಧ್ಯಕ್ಷ ಟಿ.ಎಂ. ಮುಹಿಯುದ್ದೀನ್ ಸಅದಿ ತೋಟಾಲ್ ಕಾರ್ಯಕ್ರಮ ಉದ್ಘಾಟಿಸಿದರು. ಎಸ್ಸೆಸ್ಸೆಫ್ ರಾಜ್ಯ ಸಮಿತಿ ಸದಸ್ಯ ಇಸ್ಮಾಯೀಲ್ ಮಾಸ್ಟರ್ ಮೊಂಟೆಪದವು ಅಧ್ಯಕ್ಷತೆ ವಹಿಸಿದ್ದರು.

ಸ್ಥಳೀಯ ಖತೀಬ್ ನಾಸಿರ್ ಮದನಿ ಬಾಳೆಪುಣಿ, ಜಮಾಅತ್ ಅಧ್ಯಕ್ಷ ಅಬ್ಬು ಹಾಜಿ ಪಡಿಕ್ಕಲ್. ಎಸ್.ವೈ.ಎಸ್. ಪಡಿಕ್ಕಲ್ ಬ್ರಾಂಚ್ ಉಪಾಧ್ಯಕ್ಷ ಬಾವ ಹಾಜಿ ಪಡಿಕ್ಕಲ್, ಇಸ್ಮಾಯೀಲ್ ಹಾಜಿ ತೋಟಾಲ್, ಇಸ್ಮಾಯೀಲ್ ಪಡಿಕ್ಕಲ್, ಎಸ್ಸೆಸ್ಸೆಫ್ ಪಡಿಕ್ಕಲ್ ಶಾಖಾಧ್ಯಕ್ಷ ಅಶ್ರಫ್ ಸಅದಿ ಪಡಿಕ್ಕಲ್, ಎಸ್ಸೆಸ್ಸೆಫ್ ಮೋಂಟುಗೋಳಿ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಶಂಸುದ್ದೀನ್ ಮೊಂಟೆಪದವು, ಕ್ಯಾಂಪಸ್ ಕಾರ್ಯದರ್ಶಿ ಇಲ್ಯಾಸ್ ಪೊಟ್ಟೊಳಿಕೆ, ಕೋಶಾಧಿಕಾರಿ ನಾಸಿರ್ ಮೋಂಟುಗೋಳಿ, ಸಿರಾಜ್ ಪಡಿಕ್ಕಲ್, ನಿಯಾಝ್ ಪಡಿಕ್ಕಲ್, ಸಿರಾಜ್ ನಡುಪದವು, ಸಿನಾನ್ ಸುಟ್ಟ ಮೊದಲಾದವರು ಉಪಸ್ಥಿತರಿದ್ದರು.

 ಸಂಜೆ ನಡೆದ ಸಮಾರೋಪ ಸಮಾರಂಭವನ್ನು ಅಲ್-ಮದೀನಾ ಅಧ್ಯಕ್ಷ ಶರಫುಲ್ ಉಲಮಾ ಶೈಖುನಾ ಅಬ್ಬಾಸ್ ಉಸ್ತಾದ್ ಕಾರ್ಯಕ್ರಮ ್ನ ಉದ್ಘಾಟಿಸಿದರು. ಎಸ್ಸೆಸ್ಸೆಫ್ ರಾಜ್ಯ ಸದಸ್ಯ ಇಸ್ಮಾಯೀಲ್ ಮಾಸ್ಟರ್ ಮೊಂಟೆಪದವು ಅಧ್ಯಕ್ಷತೆ ವಹಿಸಿದ್ದರು.

ಮುಡಿಪಿನ ಬ್ರೈಟ್ ವಿದ್ಯಾಸಂಸ್ಥೆ ಮುಖ್ಯಸ್ಥ ಅಬ್ದುಲ್ ಜಲೀಲ್ ಮೋಂಟುಗೋಳಿ, ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ, ಪ್ರಧಾನ ಕಾರ್ಯದರ್ಶಿ ಶರೀಫ್ ಮುಡಿಪು, ಡಿವಿಷನ್ ನಾಯಕರಾದ ತೌಸೀಫ್ ಸಅದಿ ಹರೇಕಳ, ಶರೀಫ್ ಸಅದಿ ಸಂಬಾರತೋಟ, ಕೆ.ಸಿ.ಎಫ್. ನಾಯಕರಾದ ಅಕ್ಬರ್ ಅಲಿ ಜಲ್ಲಿ ಮೊದಲಾದವರು ಉಪಸ್ಥಿತರಿದ್ದರು.

ಸೆಕ್ಟರ್ ವ್ಯಾಪ್ತಿಯ 8 ಶಾಖೆಗಳಿಗೆ 5 ವಿಭಾಗಗಳಲ್ಲಿ ನಡೆದ ಸುಮಾರು 80 ಸ್ಪರ್ಧೆಗಳಲ್ಲಿ ಅತ್ಯಧಿಕ ಅಂಕ ಗಳಿಸಿ ಎಸ್ಸೆಸ್ಸೆಫ್ ಮರಿಕ್ಕಳ ಶಾಖೆ ಚಾಂಪಿಯನ್ ಆಗಿಯೂ, ಎಸ್ಸೆಸ್ಸೆಫ್ ಮೊಂಟೆಪದವು ಶಾಖೆ ದ್ವಿತೀಯ ಸ್ಥಾನವನ್ನು, ಎಸ್ಸೆಸ್ಸೆಫ್ ಮೋಂಟುಗೋಳಿ ಶಾಖೆ ತೃತೀಯ ಸ್ಥಾನವನ್ನು ಪಡೆಯಿತು.
ಎಸ್ಸೆಸ್ಸೆಫ್ ಮೋಂಟುಗೋಳಿ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಶಂಸುದ್ದೀನ್ ಮೊಂಟೆಪದವು ಸ್ವಾಗತಿಸಿದರು. ಕ್ಯಾಂಪಸ್ ಕಾರ್ಯದರ್ಶಿ ಇಲ್ಯಾಸ್ ಪೊಟ್ಟೊಳಿಕೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News