×
Ad

ಡಿ. 22ರಿಂದ ಚೊಕ್ಕಬೆಟ್ಟುವಿನಲ್ಲಿ ಮತ ಪ್ರವಚನ

Update: 2017-12-20 17:56 IST

ಮಂಗಳೂರು, ಡಿ.20: ಎಸ್ಕೆಎಸೆಸ್ಸೆಫ್ ಮತ್ತು ಎಸ್‌ವೈಎಸ್ ಚೊಕ್ಕಬೆಟ್ಟು ಇದರ ಜಂಟಿ ಆಶ್ರಯದಲ್ಲಿ ಡಿ.22, 23ರಂದು ಮತಪ್ರವಚನ, ಮಜ್ಲಿಸುನ್ನೂರ್ ಸಂಗಮ, ಸಮಸ್ತ ನೇತಾರರ ಸಂಸ್ಮರಣೆ, ಕಚೇರಿ ಉದ್ಘಾಟನೆ ಕಾರ್ಯಕ್ರಮವು ಚೊಕ್ಕಬೆಟ್ಟು ಸರಕಾರಿ ಶಾಲಾ ಮೈದಾನದಲ್ಲಿ ಜರಗಲಿದೆ.

ಡಿ. 22ರಂದು ಬೆಳಗ್ಗೆ 7ಕ್ಕೆ ಎಸ್ಕೆಎಸೆಸ್ಸೆಫ್ ಮತ್ತು ಎಸ್‌ವೈಎಸ್ ಸಂಯುಕ್ತ ಶಾಖೆಗಳ ಕಚೇರಿಯು ಸಮಸ್ತ ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲ್ ನೇತೃತ್ವದಲ್ಲಿ ಬೊಳ್ಳೂರು ಮಸೀದಿಯ ಖತೀಬ್ ಹಾಜಿ ಮುಹಮ್ಮದ್ ಅಝ್ಹರ್ ಫೈಝಿ ಉದ್ಘಾಟಿಸಲಿದ್ದಾರೆ. ಅಂದು ಸಂಜೆ 7ಕ್ಕೆ ನಡೆಯುವ ಸಭಾ ಕಾರ್ಯಕ್ರಮವನ್ನು ಚೊಕ್ಕಬೆಟ್ಟು ಮಸೀದಿಯ ಖತೀಬ್ ಮೌಲಾನಾ ಅಬ್ದುಲ್ ಅಝೀಝ್ ದಾರಿಮಿ ಉದ್ಘಾಟಿಸಲಿದ್ದಾರೆ.

ಎಸ್ಕೆಎಸೆಸ್ಸೆಫ್ ಮಾಜಿ ಅಧ್ಯಕ್ಷ ನೂರ್ ಮುಹಮ್ಮದ್ ಅಧ್ಯಕ್ಷತೆ ವಹಿಸಲಿದ್ದು, ಎಸ್ಕೆಎಸೆಸ್ಸೆಫ್ ಜಿಲ್ಲಾಧ್ಯಕ್ಷ ಇಸಾಕ್ ಫೈಝಿ ಮುಖ್ಯ ಭಾಷಣ ಮಾಡಲಿದ್ದಾರೆ. ಸೈಯದ್ ಹಬೀಬುರ್ರಹ್ಮಾನ್ ಅಲ್‌ಬುಖಾರಿ ತಂಙಳ್ ದುಆಗೈಯಲಿದ್ದು, ಸಚಿವ ಯು.ಟಿ.ಖಾದರ್, ಮುಹಮ್ಮದ್ ಅಗರ್‌ಮೇಲು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಡಿ.23ರಂದು ಮಗ್ರಿಬ್ ನಮಾಝ್ ಬಳಿಕ ಅತ್ರಾಡಿ ಖಾಝಿ ಅಲ್‌ಹಾಜ್ ಅಬೂಬಕರ್ ಮುಸ್ಲಿಯಾರ್ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ದ.ಕ.ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಉದ್ಘಾಟಿಸಲಿದ್ದಾರೆ. ಕರೀಂ ಫೈಝಿ ಕುಂತೂರು ಮುಖ್ಯ ಭಾಷಣ ಮಾಡಲಿದ್ದಾರೆ. ಅಸೈಯದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ದುಆಗೈಯಲಿದ್ದಾರೆ.

ಶಾಸಕ ಮೊಯ್ದಿನ್ ಬಾವಾ, ಮಸೀದಿಯ ಅಧ್ಯಕ್ಷ ಸಿದ್ದೀಕ್ ಹಾಜಿ, ಜಾಮಿಯಾ ಶಾಲೆಯ ಅಧ್ಯಕ್ಷ ಹಾಜಿ ಮುಹಮ್ಮದ್ ಜತ್ತಬೆಟ್ಟು, ಕಾರ್ಪೊರೇಟರ್ ಮುಹಮ್ಮದ್ ಅಯಾಝ್, ಸ್ಥಳೀಯ ಮಸೀದಿಯ ಖತೀಬ್ ಶರೀಫ್ ಫೈಝಿ, ಕಮಾಲ್ ಹುಸೇನ್, ಮುಹಮ್ಮದ್ ಆಸೀಫ್, ಮುಹಮ್ಮದ್ ಶರೀಫ್, ಮೆಹಬೂಬ್, ಯು.ಅಬ್ದುಲ್ಲಾ ದಾರಿಮಿ, ಶಂಸುದ್ದೀನ್, ಹಾಜಿ ಮುಹಮ್ಮದ್ ಶರೀಫ್, ಸುಹೈಬ್, ಟಿ.ಮುಹಮ್ಮದ್, ಹಮೀದ್ ಹಾಜಿ ಚೊಕ್ಕಬೆಟ್ಟು, ಎಂ. ಮುಹಮ್ಮದ್, ಇಬ್ರಾಹೀಂ, ಅಬ್ದುಲ್ಲಾ ಬಾವಾ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News