×
Ad

ಕ್ಯಾನ್ಸರ್ ಪೀಡಿತ ಮಗುವಿನ ಚಿಕಿತ್ಸೆಗೆ ನೆರವು ನೀಡಲು ಮನವಿ

Update: 2017-12-20 18:02 IST

ಉಡುಪಿ, ಡಿ.20: ಬ್ಲಡ್ ಕ್ಯಾನ್ಸರ್‌ನಿಂದ ಬಳಲುತ್ತಿರುವ ಪಲಿಮಾರು ಗ್ರಾಮದ ಕರ್ನಿಕರಕಟ್ಟೆಯ ವಸಂತ ಪೂಜಾರಿ ಹಾಗೂ ವಸಂತಿ ದಂಪತಿಯ ಏಕೈಕ ಪುತ್ರಿ 5 ವರ್ಷ ಪ್ರಾಯದ ವನ್ಸಿಕಾಳ ಚಿಕಿತ್ಸೆಗೆ ನೆರವು ನೀಡುವಂತೆ ಮನವಿ ಮಾಡಲಾಗಿದೆ.

ಅನಾರೋಗ್ಯದ ಕಾರಣದಿಂದ ವನ್ಸಿಕಾಳನ್ನು ಹೆತ್ತವರು ಮಣಿಪಾಲ ಆಸ್ಪತ್ರೆಗೆ ದಾಖಲಿಸಿ, ವೈದ್ಯರು ಪರಿಕ್ಷಿಸಿದಾಗ ಮಗುವಿಗೆ ಬ್ಲಡ್ ಕ್ಯಾನ್ಸರ್ ಕಾಯಿಲೆ ಇರುವುದು ತಿಳಿದುಬಂತು. ಮಗುವಿನ ಚಿಕಿತ್ಸೆಗೆ 10 ಲಕ್ಷ ರೂ. ಖರ್ಚು ತಗಲಬಹುದೆಂದು ವೈದ್ಯರು ಹೇಳಿದ್ದಾರೆ. ಈ ಬಡ ಕುಟುಂಬಕ್ಕೆ ಇಷ್ಟು ಹಣ ಜೋಡಿ ಸುವ ಶಕ್ತಿ ಇಲ್ಲವಾಗಿದೆ.

ವಸಂತ ಪೂಜಾರಿ ಕೂಲಿ ಕೆಲಸ ಮಾಡಿ ಸಂಸಾರ  ಸಾಗಿಸುತ್ತಿದ್ದು, ವಸಂತಿ ಬಿದ್ದು ಗಾಯಗೊಂಡು ನಡೆಯಲಾರದ ಪರಿಸ್ಥಿತಿಯಲ್ಲಿದ್ದಾರೆ. ಈ ಸಂಕಷ್ಟದಲ್ಲಿ ಸಿಲುಕಿರುವ ಈ ಬಡ ಕುಟುಂಬ ಈಗಾಗಲೇ ಚಿಕಿತ್ಸೆಗಾಗಿ ಸಾಲ ಮಾಡಿ ಹಣವನ್ನು ಮಗುವಿನ ಚಿಕಿತ್ಸೆಗೆ ಭರಿಸಿದೆ. ಅಸಹಾಯಕ ಪರಿಸ್ಥಿತಿಯಲ್ಲಿರುವ ವಸಂತ ಪೂಜಾರಿ ಮಗುವಿನ ಚಿಕಿತ್ಸೆಗೆ ಸಹೃದಯಿ ಸಂಘಸಂಸ್ಥೆ, ಮಠ ಮಂದಿರ, ದಾನಿಗಳಿಂದ ಸಾರ್ವಜನಿಕರಿಂದ ಆರ್ಥಿಕ ನೆರವನ್ನು ಯಾಚಿಸಿದ್ದಾರೆ.

 ಚಿಕಿತ್ಸೆ ನೆರವು ನೀಡಲಿಚ್ಛಿಸುವ ಸಹೃದಯಿ ದಾನಿಗಳು ವಸಂತ ಪೂಜಾರಿ ಅವರ ಮೊಬೈಲ್ ಸಂಖ್ಯೆ: 8884645617, 9945048797ನ್ನು ಸಂಪರ್ಕಿಸ ಬಹುದು. ವಸಂತ ಪೂಜಾರಿ, ಸಿಂಡಿಕೇಟ್ ಬ್ಯಾಂಕ್ ಪಲಿಮಾರು ಶಾಖೆ, ಖಾತೆ ನಂಬರ್ -01292200034591, ಐಎಫ್‌ಎಸ್‌ಸಿ ಕೋಡ್- ಎಸ್‌ವೈ ಎನ್‌ಬಿ0000129 ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News