ದಾವೂದ್ ಇಬ್ರಾಹೀಂ ಆಪ್ತ ಛೋಟಾ ಶಕೀಲ್ ಸಾವು?
ಹೊಸದಿಲ್ಲಿ, ಡಿ.20: ಭೂಗತ ಪಾತಕಿ ದಾವೂದ್ ಇಬ್ರಾಹೀಂನ ಆಪ್ತ ಛೋಟಾ ಶಕೀಲ್ ಮೃತಪಟ್ಟಿದ್ದಾನೆ ಎನ್ನುವ ಮಾಹಿತಿಗಳು ಲಭ್ಯವಾಗಿದೆ ಎಂದು hindustantimes.com ವರದಿ ಮಾಡಿದೆ.
ಶಕೀಲ್ ಗ್ಯಾಂಗ್ ನ ಸದಸ್ಯ ಬಿಲಾಲ್ ಹಾಗು ಶಕೀಲ್ ಸಂಬಂಧಿಯೊಬ್ಬರ ನಡುವಿನ ಮಾತುಕತೆಯ ಆಡಿಯೋ ಕ್ಲಿಪ್ ಒಂದು ಈ ಸುದ್ದಿಗೆ ಪುಷ್ಠಿ ನೀಡಿದೆಯಾದರೂ ಇನ್ನೂ ದೃಢಪಟ್ಟಿಲ್ಲ.
ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯದ ಉನ್ನತ ಅಧಿಕಾರಿಗಳು ಹಾಗು ಮುಂಬೈ ಪೊಲೀಸರು ಈ ಸುದ್ದಿಯನ್ನು ಖಚಿತಪಡಿಸಲು ಹಾಗು ನಿರಾಕರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇಸ್ಲಾಮಾಬಾದ್ ನಲ್ಲಿ ಜನವರಿ 6ರಂದು ಛೋಟಾ ಶಕೀಲ್ ಮೃತಪಟ್ಟಿದ್ದಾನೆ ಎಂದು ಭೂಗತ ಮೂಲಗಳು ತಿಳಿಸಿವೆ ಎನ್ನಲಾಗಿದೆ. ಆತ ಹೃದಯಾಘಾತಕ್ಕೊಳಗಾಗಿದ್ದು, ಬಾಡಿಗಾರ್ಡ್ ಗಳು ತಕ್ಷಣವೇ ಆತನನ್ನು ರಾವಲ್ಪಿಂಡಿಯ ಆಸ್ಪತ್ರೆಯ ದಾಖಲಿಸಿದ್ದಾರೆ. ಆದರೆ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿರುವುದಾಗಿ ಒಂದು ಮೂಲ ತಿಳಿಸಿದೆ. ಇನ್ನೊಂದು ಮೂಲದ ಪ್ರಕಾರ ಪಾಕಿಸ್ತಾನದ ಐಎಸ್ ಐ ಶಕೀಲ್ ನನ್ನು ಹತ್ಯೆಗೈದಿದೆ ಎನ್ನಲಾಗಿದೆ.