×
Ad

ಹಳಿ ದುರಸ್ತಿ: ಡಿ. 23ಕ್ಕೆ ರೈಲು ಸಂಚಾರ ವ್ಯತ್ಯಯ

Update: 2017-12-20 22:03 IST

ಉಡುಪಿ, ಡಿ. 20:  ಪಡೀಲು ಮತ್ತು ಜೋಕಟ್ಟೆ ಮಧ್ಯೆ ಸಬ್‌ವೇ ನಿರ್ಮಾಣಕ್ಕಾಗಿ ಆರ್‌ಸಿಸಿ ಬಾಕ್ಸ್‌ಗಳನ್ನು ಅಳವಡಿಸುವ ಕಾರ್ಯ ನಡೆಯಲಿರುವುದರಿಂದ ಡಿ.23ರ  ಅಪರಾಹ್ನ 1:45ರಿಂದ ಸಂಜೆ 7:15ರವರೆಗೆ ಒಟ್ಟು 5ಗಂಟೆ 30 ನಿಮಿಷಗಳ ಕಾಲ ದಕ್ಷಿಣ ರೈಲ್ವೆಯು ಈ ಮಾರ್ಗ ದಲ್ಲಿ ರೈಲುಗಳ ಸಂಚಾರವನ್ನು ತಡೆ ಹಿಡಿದಿದೆ. ಇದರಿಂದ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

 ಡಿ.23ರಂದು ರೈಲು ನಂ.12133/12134 ಮುಂಬಯಿ ಸಿಎಸ್‌ಎಂಟಿ- ಮಂಗಳೂರು ಜಂಕ್ಷನ್- ಮುಂಬಯಿ ಸಿಎಸ್‌ಎಂಟಿ ರೈಲಿನ ಸಂಚಾರವನ್ನು ಮಂಗಳೂರು ಜಂಕ್ಷನ್-ಸುರತ್ಕಲ್-ಮಂಗಳೂರು ಜಂಕ್ಷನ್ ನಡುವೆ ರದ್ದು ಪಡಿಸಲಾಗಿದೆ. ರೈಲು ನಂ.12620 ಮಂಗಳೂರು ಸೆಂಟ್ರಲ್-ಕುರ್ಲಾ ಟರ್ಮಿನಸ್ ಮತ್ಸಗಂಧ ಎಕ್ಸ್‌ಪ್ರೆಸ್‌ನ ಸಂಚಾರವನ್ನು ಮಂಗಳೂರು-ಸುರತ್ಕಲ್ ಮಧ್ಯೆ ರದ್ದುಪಡಿಸಲಾಗಿದೆ.

ರೈಲು ನಂ.70105/70106 ಮಡಗಾಂವ್- ಮಂಗಳೂರು ಸೆಂಟ್ರಲ್- ಮಡಗಾಂವ್ ಪ್ಯಾಸೆಂಜರ್ ರೈಲು (ಡೆಮು) ಸಂಚಾರವನ್ನು ತೋಕೂರು- ಮಂಗಳೂರು ಸೆಂಟ್ರಲ್-ತೋಕೂರು ನಡುವೆ ರದ್ದುಪಡಿಸಲಾಗಿದೆ ಎಂದು ಕೊಂಕಣ ರೈಲ್ವೆಯ ಹಿರಿಯ ಸಾರ್ವಜನಿಕ ಸಂಪರ್ಕ ಅಧಿಕಾರಿಯವರ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News