×
Ad

ಮಾಧ್ಯಮದವರೊಂದಿಗೆ ಕ್ರಿಸ್ಮಸ್ ಸ್ನೇಹ ಸಮ್ಮಿಲನ ಕೂಟ

Update: 2017-12-20 22:20 IST

ಉಡುಪಿ, ಡಿ.20: ಉಡುಪಿ ಕ್ರೈಸ್ತ ಧರ್ಮಪ್ರಾಂತದ ವತಿಯಿಂದ ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಮಾಧ್ಯಮದವರೊಂದಿಗೆ ಸ್ನೇಹ ಸಮ್ಮಿಲನ ಕೂಟವನ್ನು ಬುಧವಾರ ಉಡುಪಿ ಶೋಕಮಾತಾ ಇಗರ್ಜಿಯ ಸಭಾಂಗಣದಲ್ಲಿ ಆಯೋಜಿ ಸಲಾಗಿತ್ತು.

ಉಡುಪಿ ಕ್ರೈಸ್ತ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಜೆರಾಲ್ಡ್ ಐಸಾಕ್ ಲೋಬೊ ಆಶೀರ್ವಚನ ನೀಡಿ, ಕ್ರಿಸ್ಮಸ್ ಹಬ್ಬವು ನಮ್ಮೆಲ್ಲರಿಗೂ ಪ್ರೀತಿ ಹಾಗೂ ಸುಖ ಶಾಂತಿಯನು್ನ ನೀಡಲಿ ಎಂದು ಶುಭಹಾರೈಸಿದರು.

ಕಾರ್ಪೊರೇಶನ್ ಬ್ಯಾಂಕ್ ಉಡುಪಿ ವಲಯ ಮಹಾಪ್ರಬಂಧಕಿ ದೇಲಿಯಾ ಪಾಯಸ್, ಜಿಲ್ಲಾ ವಾರ್ತಾಧಿಕಾರಿ ಕೆ.ರೋಹಿಣಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ್‌ಪ್ರಸಾದ್ ಪಾಡೇಲು, ಕ್ರೈಸ್ತ ಅಭಿವೃದ್ಧಿ ಮಂಡಳಿಯ ಸದಸ್ಯ ಪ್ರಶಾಂತ್ ಜತ್ತನ್ನ, ಧರ್ಮಪ್ರಾಂತದ ಸಾರ್ವಜನಿಕ ಸಂಪರ್ಕಾಧಿಕಾರಿ ಡೆನ್ನಿಸ್ ಡೇಸಾ ಉಪಸ್ಥಿತರಿದ್ದರು.

ಫಾ.ಚೇತನ್ ಲೋಬೊ ಸ್ವಾಗತಿಸಿದರು. ಮಾಧ್ಯಮ ಸಂಯೋಜಕ ಮೈಕಲ್ ರೋಡ್ರಿಗಸ್ ವಂದಿಸಿದರು. ಫಾ.ರಾಯ್‌ಸ್ಟನ್ ಫೆರ್ನಾಂಡಿಸ್ ಶಂಕಪುರ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News