ಮಣಿಪಾಲ ಪ್ರೆಸ್ ಉದ್ಯೋಗಿ ನಾಪತ್ತೆ
Update: 2017-12-20 22:46 IST
ಉಡುಪಿ, ಡಿ.20: ಪುತ್ತೂರು ಗ್ರಾಮದ ನಯಂಪಳ್ಳಿಯ ರಾಘವೇಂದ್ರ ಪೈ (36) ಎಂಬವರು ಡಿ.17ರಂದು ಸಂಜೆಯಿಂದ ನಾಪತ್ತೆಯಾಗಿದ್ದಾರೆ.
ಮಣಿಪಾಲ ಪ್ರೆಸ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಇವರು ಮನೆಯಿಂದ ಬೆಂಗಳೂರಿಗೆ ಕೆಲಸದ ನಿಮಿತ್ತ ಹೋಗಿ ಮಂಗಳವಾರ ಬರುವುದಾಗಿ ಹೇಳಿ ಹೋಗಿದ್ದು, ನಂತರ ಅವರ ಮೊಬೈಲ್ ಸ್ವಿಚ್ ಆಪ್ ಆಗಿತ್ತು. ಅವರ ಬಗ್ಗೆ ಮಣಿಪಾಲ ಕಚೇರಿಯಲ್ಲಿ ವಿಚಾರಿಸಿದಾಗ ಅವರು 10 ದಿನಗಳ ರಜೆ ಪಡೆದು ಕೊಂಡು ಹೋಗಿರುವುದಾಗಿ ತಿಳಿದು ಬಂದಿದೆ ಎಂದು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ತಿಳಿಸಲಾಗಿದೆ.