ಸಾಲ ಸುಸ್ತಿ ಬಾಕಿ: ಕಿಶನ್ ಹೆಗ್ಡೆ ಕೊಳ್ಕೆಬೈಲು ನಿರ್ದೇಶಕತ್ವ ರದ್ದು

Update: 2017-12-20 17:20 GMT

ಮಂಗಳೂರು, ಡಿ. 20: ಕಿಶನ್ ಹೆಗ್ಡೆ ಕೊಳ್ಕೆಬೈಲು ಅವರನ್ನು ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 29ಸಿ(8)(ಬಿ) ಪ್ರಕಾರ ಅನರ್ಹತೆಗೆ ಒಳಗಾಗಿರುವುದರಿಂದ ಕುಂದಾಪುರ ಉಪಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಸ್ಥಾನದಿಂದ ಅನರ್ಹಗೊಳಿಸಿ ವಜಾ ಮಾಡಿ ಆದೇಶ ಹೊರಡಿಸಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ.

ಕಿಶನ್ ಹೆಗ್ಡೆಯವರು ಉಡುಪಿಯ ಬಡಗು ಬೆಟ್ಟು ಕ್ರೆಡಿಟ್ ಕೊಪರೇಟಿವ್ ಸೊಸೈಟಿ ಮತ್ತು ಉಡುಪಿ ಸಾಬರಕಟ್ಟೆಯ ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಸಂಘಳಲ್ಲಿ ಸಾಲ ಪಡೆದು ದೀರ್ಘಕಾಲದಿಂದ ಮರುಪಾವತಿ ಮಾಡದೆ ಸುಸ್ತಿ ಬಾಕಿ ಇರುವ ಕಾರಣ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ಮತ್ತು ನ್ಯಾಯಾಲಯಗಳ ಆದೇಶಗಳನ್ವಯ ಕ್ರಮಕೈಗೊಂಡು ಸಾಲ ಸಕಾಲದಲ್ಲಿ ಮರಪಾವತಿಸದಿದ್ದಲ್ಲಿ ನಿಯಮಗಳನ್ವಯ ಸುಸ್ತಿದಾರರಾಗಿರುವ ಕಾರಣ ಸದ್ರಿಯವರು ಆಡಳಿತ ಮಂಡಳಿಯ ನಿರ್ದೇಶಕತ್ವ ಸ್ಥಾನದಲ್ಲಿ ಮುಂದುವರಿಯಲು ಅನರ್ಹರಾಗಿರುತ್ತಾರೆಂದು ಸರ್ವೋಚ್ಚ ನ್ಯಾಯಾಲಯದ ತೀರ್ಪುನ್ನು ಉಲ್ಲೇಖಿಸಿ ಸಹಕಾರ ಸಂಘಗಳ ಕಾಯ್ದೆ ಪ್ರಕರಣ 29ಸಿ(8)(ಬಿ)ಯ ಪ್ರಕಾರ ಅನರ್ಹಗೊಳಿಸಿ ಕುಂದಾಪುರ ಉಪಭಾಗ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಮಂಗಳವಾರ ಆದೇಶ ಹೊರಡಿಸಿದ್ದಾರೆ.

ಕಿಶನ್ ಹೆಗ್ಡೆಯವರು ಓರ್ವ ಜವಾಬ್ದಾರಿಯುತ ನಿರ್ದೇಶಕರಾಗಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷರಾಗಿ, ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಉಡುಪಿ ಇದರ ನಿರ್ದೇಶಕರಾಗಿ, ಉಡುಪಿ ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘದ ನಿರ್ದೇಶಕರಾಗಿ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್‌ನ ಅಧ್ಯಕ್ಷ ಸಹಕಾರ ಕ್ಷೇತ್ರದಲ್ಲಿ ಮುಂದುವರಿಯುತ್ತಿರುವುದು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ.

ಸಹಕಾರ ಸಂಘಗಳ ಕಾಯ್ದೆ ಪ್ರಕಾರ ಮುಂದಿನ 5 ವರ್ಷಗಳ ಕಾಲ ಯಾವುದೇ ಸಹಕಾರ ಸಂಘಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು, ಆಯ್ಕೆಯಾಗಲು, ನೇಮಕವಾಗಲು ಅಥವಾ ಮುಂದುವರಿಯಲು ಅನರ್ಹಗೊಂಡಿದ್ದಾರೆಂದು ಆದೇಶದಲ್ಲಿ ತಿಳಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News