ಮೊಸುಲ್ ವಿಮೋಚನೆ: 10,000 ನಾಗರಿಕರು ಬಲಿ

Update: 2017-12-20 17:31 GMT

ಮೊಸುಲ್ (ಇರಾಕ್), ಡಿ. 20: ಇರಾಕ್‌ನ ಮೊಸುಲ್ ನಗರವನ್ನು ಐಸಿಸ್ ಭಯೋತ್ಪಾದಕರಿಂದ ಮುಕ್ತಗೊಳಿಸುವ ಕಾರ್ಯಾಚರಣೆಯ ವೇಳೆ 9,000ದಿಂದ 11,000 ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ.

ಆದರೆ, ಈ ಸಂಖ್ಯೆಯನ್ನು ಅಮೆರಿಕ ನೇತೃತ್ವದ ಮಿತ್ರಪಡೆಯಾಗಲಿ, ಇರಾಕ್ ಸರಕಾರವಾಗಲಿ ಅನುಮೋದಿಸಿಲ್ಲ.

ಆದರೆ, ಮೊಸುಲ್‌ನಲ್ಲಿ ಗೋರಿಗಳಿಗೆ ಗುಂಡಿ ತೋಡುವವರು, ಶವಾಗಾರ ಕೆಲಸಗಾರರು ಮತ್ತು ಕಟ್ಟಡದ ಅವಶೇಷಗಳಿಂದ ಮೃತದೇಹಗಳನ್ನು ಹೊರತೆಗೆಯುವ ಸ್ವಯಂಸೇವಕರು ತಾವು ನಿರ್ವಹಿಸಿದ ಶವಗಳ ಲೆಕ್ಕಿವಿಟ್ಟಿದ್ದಾರೆ.

ಇರಾಕ್ ಅಥವಾ ಮೈತ್ರಿಕೂಟ ಪಡೆಗಳು ನಡೆಸಿದ ವಾಯುದಾಳಿಗಳು ಹಾಗೂ ಮೋರ್ಟರ್ ದಾಳಿಗಳಲ್ಲಿ ಕನಿಷ್ಠ 3,200 ನಾಗರಿಕರು ಮೃತಪಟ್ಟಿದ್ದಾರೆ ಎಂದು ಅಸೋಸಿಯೇಟಡ್ ಪ್ರೆಸ್ ವರದಿ ಮಾಡಿದೆ. ಉಳಿದವರು ಐಸಿಸ್ ನಡೆಸಿದ ಹಿಂಸಾಚಾರದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News