ಬಸ್ ಢಿಕ್ಕಿ: ಪಾದಚಾರಿ ಮೃತ್ಯು
Update: 2017-12-21 19:15 IST
ಪಡುಬಿದ್ರೆ, ಡಿ. 21: ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲದಲ್ಲಿ ಬಸ್ಸೊಂದು ಮಹಿಳೆಗೆ ಢಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ಬೆಳಗ್ಗೆ ನಡದಿದೆ.
ಬಾಗಲಕೋಟೆ ನಿವಾಸಿ ರೇನವ್ವ (30) ಮೃತರು ಎಂದು ಗುರುತಿಸಲಾಗಿದೆ. ಉಚ್ಚಿಲದ ಬಡಾ ಗ್ರಾಮದಲ್ಲಿ ಗುಜರಿ ಹೆಕ್ಕುವ ಮಹಿಳೆಯಾಗಿದ್ದು, ಈಕೆ ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿ 66ರ ಬಬ್ಬು ಸ್ವಾಮಿ ಗೇರೇಜ್ ಬಳಿ ನಡೆದುಕೊಂಡು ಹೋಗುತಿದ್ದ ವೇಳೆ ವೇಗದೂತ ಬಸ್ ಢಿಕ್ಕಿ ಹೊಡೆಯಿತು. ಈ ಬಗ್ಗೆ ಪಡುಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.