×
Ad

ಮೂಲಭೂತ ಸೌಕರ್ಯದಲ್ಲಿ ಪಕ್ಷಭೇದ ಸರಿಯಲ್ಲ- ಕಾಗೋಡು ತಿಮ್ಮಪ್ಪ

Update: 2017-12-21 19:21 IST

ಭಟ್ಕಳ, ಡಿ. 21: ಮೂಲಭೂತ ಸೌಕರ್ಯಗಳು ಕಲ್ಪಿಸುವ ಸಂದರ್ಭ ಪಕ್ಷ-ಪಂಗಡ-ಓಟಿನ ದೃಷ್ಠಿ ಬದಿಗಿಟ್ಟು ಸಮಾಜ ಸೇವೆ ಮಾಡಿದ ಧನ್ಯತಾಭಾವ ಅನುಭವಿಸುವ ದೃಷ್ಠಿಯಿಟ್ಟು ಕೆಲಸ ಮಾಡಬೇಕು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

ಅವರು ಬುಧವಾರ ಸಂಜೆ ತಾಲೂಕಿನ ಹಾಡವಳ್ಳಿ ಸಮೀಪದ ಸಾಗರ ತಲೂಕಿನ ಆರ್ಕಳದಲ್ಲಿ ಜರುಗಿದ ನಮ್ಮ ಗ್ರಾಮ ನಮ್ಮ ರಸ್ತೆ ಹಂತ-4ರ ಯೋಜನೆಯಡಿ ಆರ್ಕಳದಿಂದ ಸಾಗರ-ಭಟ್ಕಳ ತಾಲೂಕಿನ ಗಡಿ ತನಕದ 3.11 ಕಿ.ಮೀ. ಅಳತೆಯ 243.50ಲಕ್ಷ ರೂಪೈ ಅಂದಾಜು ಮೊತ್ತದ ರಸ್ತೆ ಅಭಿವೃದ್ಧಿ ಮತ್ತು ಡಾಂಬರೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು.

ಕುಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಘನ ಸರ್ಕಾರದ ಈ ಯೋಜನೆಯಡಿ ಕಾರ್ಯಗತವಾಗುತ್ತಿರುವ ಗ್ರಾಮದಲ್ಲಿ ಬೆರಳೆಣಿಕೆಯ ಮತದಾರರಿದ್ದಾರೆ. ರಾಜಕೀಯವಾಗಿ ನಾವು ಯೋಚಿಸುವದಾದರೆ ಕೊಟ್ಯಾಂತರ ರೂಪೈಗಳ ವಿನಿಯೋಗ ಅಸಾಧ್ಯವಾಗುತಿತ್ತು ಆದರೆ ಕಾಡಿನ ಮಧ್ಯ ರಸ್ತೆ ಸಮಸ್ಯೆಯಿಂದ ಬಡವರು ಶಿಕ್ಷಣ, ಆರೋಗ್ಯ, ಉದ್ಯೋಗದಿಂದ ವಂಚಿತರಾಗಬಾರದೆನ್ನುವದನ್ನು ಮನಗಂಡು ಕಾಮಗಾರಿ ಮಂಜೂರಿ ಮಾಡಲಾಗಿದೆ ಸಾರ್ವಜನಿಕರು ಕಾಮಗಾರಿ ಹಂತದಲ್ಲಿ ಪ್ರತಿನಿತ್ಯ ಗುಣಮಟ್ಟ ಗಮನಿಸುತ್ತಿರಬೇಕು. ಕಳಪೆ ಕಂಡು ಬಂದಲ್ಲಿ ನೇರವಾಗಿ ತನ್ನ ಗಮನಕ್ಕೆ ತರಲು ತಿಳಿಸಿದರು.

ಹಾಡವಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಧರ ಶೆಟ್ಟಿ ಸಚಿವರಿಗೆ ಶಾಲು ಹೊದಿಸಿ ಮಾಲಾರ್ಪಣೆ ಮಾಡಿ ಸನ್ಮಾನಿಸಿದರು ಮತ್ತು ಅತಿಕ್ರಮಣದಾರರ ಪರವಾಗಿ ಮನವಿ ಅರ್ಪಿಸಿದರು.

ವೇದಿಕೆಯಲ್ಲಿ ಸಾಗರ ತಾ.ಪಂ.ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ತಾಳಗುಪ್ಪ ಜಿ.ಪಂ.ಸದಸ್ಯ ರಾಜಶೇಖರ ಗಾಳಿಪುರ, ಚನ್ನಗೊಂಡ ಗ್ರಾ.ಪಂ.ಅಧ್ಯಕ್ಷೆ ಆರತಿ ಉದಯಕುಮಾರ, ಉಪಾಧ್ಯಕ್ಷ ವಿಜಯಕುಮಾರ, ಎಪಿಎಂಸಿ ಸದಸ್ಯ ಕೇಶವ ಗೊಂಡ, ಗ್ರಾ.ಪಂ.ಸದಸ್ಯೆ ಸವಿತಾ ಕೃಷ್ಣ ಗೊಂಡ, ಹಾಡವಳ್ಳಿ ಗ್ರಾ.ಪಂ.ಸದಸ್ಯ ಗಣೇಶ ನಾಯ್ಕ, ಸೋಮಯ್ಯ ಗೊಂಡ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News