ಡಿ. 26: ‘ತುಳು ವಚನ ಅನುವಾದ ಸಂಪುಟ’ ಬಿಡುಗಡೆ
Update: 2017-12-21 20:07 IST
ಮಂಗಳೂರು, ಡಿ.21: ಬೆಂಗಳೂರಿನ ಬಸವ ಸಮಿತಿಯು ಕನ್ನಡದಿಂದ ತುಳುವಿಗೆ ಅನುವಾದಗೊಳಿಸಿರುವ ‘ತುಳು ವಚನ ಅನುವಾದ ಸಂಪುಟ’ದ ಬಿಡುಗಡೆ ಕಾರ್ಯಕ್ರಮವು ಡಿ.26ರಂದು ಸಂಜೆ 3:30ಕ್ಕೆ ಉರ್ವಸ್ಟೋರ್‌ನಲ್ಲಿರುವ ಅಕಾಡಮಿಯ ತುಳುಭವನದ ಸಿರಿಚಾವಡಿಯಲ್ಲಿ ನಡೆಯಲಿದೆ.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ‘ತುಳು ವಚನ ಅನುವಾದ ಸಂಪುಟ’ ಗ್ರಂಥವನ್ನು ಬಿಡುಗಡೆ ಮಾಡಲಿದ್ದಾರೆ.ಬಸವ ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ ಅಧ್ಯಕ್ಷತೆ ವಹಿಸಲಿದ್ದಾರೆ. ತುಳು ವಚನ ಅನುವಾದ ಸಂಪುಟದ ಸಂಪಾದಕ ಡಾ.ಬಿ.ಎ. ವಿವೇಕ ರೈ, ತುಳು ಅಕಾಡಮಿಯ ಅಧ್ಯಕ್ಷ ಎ.ಸಿ ಭಂಡಾರಿ, ಬಸವ ಸಮಿತಿಯ ಸಂಶೋಧನೆ ಮತ್ತು ಪ್ರಕಟಣಾ ವಿಭಾಗದ ನಿರ್ದೇಶಕ ಎಸ್.ಐ ಭಾವಿಕಟ್ಟಿ ಉಪಸ್ಥಿತರಿರುವರು ಎಂದು ಪ್ರಕಟನೆ ತಿಳಿಸಿದೆ.