×
Ad

ಉಡುಪಿ: ಶಿವ ಹಾದಿಮನಿ‘ಡೈಮಂಡ್ ಸ್ಟ್ರೋಕ್’; ಕಲಾಕೃತಿಗಳ ಪ್ರದರ್ಶನ

Update: 2017-12-21 20:16 IST

ಉಡುಪಿ, ಡಿ. 21: ಹಾವೇರಿಯ ಪ್ರಸಿದ್ದ ಕಲಾವಿದ ಶಿವ ಹಾದಿಮನಿ ಅವರ ಡೈಮಂಡ್ ಸ್ಟ್ರೋಕ್ ಮಾಲಿಕೆಯ ಕಲಾಚಿತ್ರಗಳು ಉಡುಪಿ ಅದಿತಿ ಆರ್ಟ್ ಗ್ಯಾಲರಿಯಲ್ಲಿ ಡಿ.22ರಿಂದ ಡಿ.25ರವರೆಗೆ ಪ್ರದರ್ಶನಗೊಳ್ಳಲಿವೆ.

ಶಿವ ಅವರ ಸುಮಾರು 50 ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ. ಕೃಷ್ಣ ಲೀಲೆಯ ಕುರಿತು ವಿಶೇಷ ಚಿತ್ರ ರಚಿಸಿರುವ ಹಾದಿಮನಿ, ಡಿ.23ರಂದು ಸಂಜೆ 4 ಗಂಟೆಗೆ ಅದಿತಿ ಆರ್ಟ್ ಗ್ಯಾಲರಿಯಲ್ಲಿ ಕಲಾಕೃತಿಗಳ ಕುರಿತು ಪ್ರಾತ್ಯಕ್ಷಿಕೆ ಯನ್ನು ನೀಡಲಿದ್ದಾರೆ. ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಗ್ಯಾಲರಿಯ ಆಡಳಿತ ವಿಶ್ವಸ್ಥ ಡಾ. ಕಿರಣ್ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಕುಲಸಚಿವ ಡಾ. ನಾರಾಯಣ ಸಭಾಹಿತ್, ಉಡುಪಿ ನಗರಸಭೆಯ ಮಾಜಿ ಅಧ್ಯಕ್ಷ ಎಂ.ಸೋಮಶೇಖರ ಭಟ್, ಆರ್ಟಿಸ್ಟ್‌ಫೋರಂ ರಜತ ಮಹೋತ್ಸವ ಸಮಿತಿಅಧ್ಯಕ್ಷ ಯು.ರಮೇಶ್ ರಾವ್ ಭಾಗವಹಿಸಲಿದ್ದಾರೆ.

ಮೂರು ದಿನಗಳ ಕಾಲ ಬೆಳಗ್ಗೆ 10ರಿಂದ ಸಂಜೆ 7ರತನಕ ಕಲಾಕೃತಿಗಳನ್ನು ವೀಕ್ಷಿಸಬಹುದು ಎಂದೂ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News