ಆರ್.ಕೆ. ನಗರ ಉಪಚುನಾವಣೆ: ಶೇ. 60 ಮತದಾನ
Update: 2017-12-21 21:00 IST
ಚೆನ್ನೈ, ಡಿ. 21: ಗುರುವಾರ ನಡೆದ ರಾಧಾಕೃಷ್ಣ ನಗರ (ಆರ್.ಕೆ.) ವಿಧಾನ ಸಭೆ ಉಪ ಚುನಾವಣೆಯಲ್ಲಿ ಶೇ. 60 ಮತದಾನವಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.
ಎಐಎಡಿಎಂಕೆಯಿಂದ ಎ. ಮಧುಸೂದನನ್, ಡಿಎಂಕೆಯಿಂದ ಎನ್. ಮೃದುಲಾ ಗಣೇಶ್, ಸ್ವತಂತ್ರ ಅಭ್ಯರ್ಥಿ ಟಿ.ಟಿ.ವಿ. ದಿನಕರನ್ ಹಾಗೂ ಬಿಜೆಪಿಯಿಂದ ಕೆ. ನಾಗರಾಜ್ ಕಣದಲ್ಲಿರುವ ಪ್ರಮುಖರು.
ಎಐಎಡಿಎಂಕೆ ನಾಯಕಿ ಹಾಗೂ ಮುಖ್ಯಮಂತ್ರಿ ಜಯಲಲಿತಾ 2016 ಡಿಸೆಂಬರ್ 5ರಂದು ನಿಧನರಾದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಈ ಚುನಾವಣೆ ನಡೆದಿದೆ. ಮತದಾನ 5 ಗಂಟೆಗೆ ಪೂರ್ಣಗೊಂಡಿತು. ಒಂದು ಮತದಾನ ಕೇಂದ್ರದಲ್ಲಿ ಮಾತ್ರ ವಿದ್ಯುನ್ಮಾನ ಮತದಾನ ಯಂತ್ರ (ಇವಿಎಂ)ನಲ್ಲಿ ತೊಂದರೆ ಕಾಣಿಸಿಕೊಂಡಿದೆ.
ಮತ ಎಣಿಕೆ ಡಿಸೆಂಬರ್ 24ರಂದು ನಡೆಯಲಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.