×
Ad

ಜಾಧವ್‌ಗೆ ಶೀಘ್ರ ಗಲ್ಲಿಗೇರುವ ಬೆದರಿಕೆಯಿಲ್ಲ: ಪಾಕ್

Update: 2017-12-21 21:50 IST

ಇಸ್ಲಾಮಾಬಾದ್, ಡಿ. 21: ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಶೀಘ್ರ ಗಲ್ಲಿಗೇರುವ ಬೆದರಿಕೆಯನ್ನು ಎದುರಿಸುತ್ತಿಲ್ಲ ಹಾಗೂ ‘ಕೇವಲ ಮಾನವೀಯ ನೆಲೆಯಲ್ಲಿ’ ತನ್ನ ಪತ್ನಿ ಮತ್ತು ತಾಯಿಯನ್ನು ಭೇಟಿಯಾಗುವ ಅವಕಾಶವನ್ನು ಅವರಿಗೆ ಕಲ್ಪಿಸಲಾಗಿದೆ ಎಂದು ಪಾಕಿಸ್ತಾನ ಗುರುವಾರ ಹೇಳಿದೆ.

‘‘ಶೀಘ್ರವೇ ಗಲ್ಲಿಗೇರುವ ಭೀತಿಯನ್ನು ಜಾಧವ್ ಎದುರಿಸುತ್ತಿಲ್ಲ ಎಂದು ನಾನು ಭರವಸೆ ನೀಡುತ್ತೇನೆ. ಅವರ ದಯಾ ಅರ್ಜಿಯ ವಿಚಾರಣೆ ಈಗಲೂ ನಡೆಯುತ್ತಿದೆ’’ ಎಂದು ಪಾಕಿಸ್ತಾನ ವಿದೇಶ ಕಚೇರಿಯ ವಕ್ತಾರ ಮುಹಮ್ಮದ್ ಫೈಝಲ್ ಹೇಳಿದರು.

‘ಇಸ್ಲಾಮಿಕ್ ಸಂಪ್ರದಾಯಗಳಿಗೆ ಅನುಗುಣವಾಗಿ ಹಾಗೂ ಸಂಪೂರ್ಣ ಮಾನವೀಯ ನೆಲೆಯಲ್ಲಿ ಜಾಧವ್ ಪತ್ನಿ ಮತ್ತು ತಾಯಿ ಇಸ್ಲಾಮಾಬಾದ್‌ನಲ್ಲಿ ಡಿಸೆಂಬರ್ 25ರಂದು ಅವರನ್ನು ಭೇಟಿಯಾಗಲಿದ್ದಾರೆ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News