×
Ad

ವಾಯುಪಡೆಗೆ ಎಚ್‌ಎಎಲ್‌ನಿಂದ 83 ಲಘು ಯುದ್ಧ ವಿಮಾನ

Update: 2017-12-21 22:00 IST

ಹೊಸದಿಲ್ಲಿ, ಡಿ.21: ಅತ್ಯಾಧುನಿಕ 83 ತೇಜಸ್ ಲಘು ಯದ್ಧವಿಮಾನಗಳನ್ನು ಸುಮಾರು 60,000 ಕೋಟಿ ರೂ. ವೆಚ್ಚದಲ್ಲಿ ಸ್ಥಳೀಯವಾಗಿ ನಿರ್ಮಿಸಿ ಪೂರೈಸುವ ಬಗ್ಗೆ ವಿವರವಾದ ಪ್ರಸ್ತಾವನೆ ಸಲ್ಲಿಸುವಂತೆ ವಾಯುಪಡೆಯು ಬೆಂಗಳೂರು ಮೂಲದ ಹಿಂದುಸ್ತಾನ್ ಏರೋನಾಟಿಕ್ಸ್ ಲಿ.(ಎಚ್‌ಎಎಲ್)ಗೆ ತಿಳಿಸಿದೆ.

  ಭಾರತೀಯ ವಾಯುಪಡೆ ಈ ಹಿಂದೆಯೇ 40 ತೇಜಸ್ ಲಘು ಯುದ್ಧ ವಿಮಾನಗಳ ಪೂರೈಕೆ ಕುರಿತಂತೆ ಎಚ್‌ಎಎಲ್ ಜೊತೆ ಒಪ್ಪಂದ ಮಾಡಿಕೊಂಡಿದ್ದು ಇದರಲ್ಲಿ ಐದು ಯುದ್ದವಿಮಾನಗಳನ್ನು ಈಗಾಗಲೇ ಒದಗಿಸಲಾಗಿದೆ. ಉಳಿದ ಯುದ್ದವಿಮಾನಗಳನ್ನು 2020-21ರ ವೇಳೆಗೆ ಒದಗಿಸುವ ನಿರೀಕ್ಷೆಯಿದೆ. ಈ ಮಧ್ಯೆ, ಹೆಚ್ಚುವರಿ 83 ಯುದ್ದವಿಮಾನಗಳನ್ನು ಒದಗಿಸುವ ಕುರಿತು ಮಾರ್ಚ್ 2018ರ ಒಳಗೆ ಪ್ರಸ್ತಾವನೆ ಪತ್ರ ಸಲ್ಲಿಸುವಂತೆ ತಿಳಿಸಲಾಗಿದೆ ಎಂದು ವಾಯುಪಡೆ ಅಧಿಕಾರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News