ಉಡುಪಿ: ಡಿ.31ರಂದು ಶ್ವಾನ ಪ್ರದರ್ಶನ
Update: 2017-12-21 23:00 IST
ಉಡುಪಿ, ಡಿ.21: ಜಿಲ್ಲಾಡಳಿತ, ಕರ್ನಾಟಕ ಪಶು ವೈದ್ಯಕೀಯ ಸಂಘ ಉಡುಪಿ ಜಿಲ್ಲಾ ಶಾಖೆ, ಜಿಲ್ಲಾ ಪ್ರಾಣಿದಯಾ ಸಂಘ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಅಜ್ಜರಕಾಡು ಭುಜಂಗ ಪಾರ್ಕ್ ಆವರಣದಲ್ಲಿ ಉಡುಪಿ ಪರ್ಬದ ಅಂಗವಾಗಿ ಡಿ.31ರ ಬೆಳಗ್ಗೆ 10 ಗಂಟೆಗೆ ಶ್ವಾನ ಪ್ರದರ್ಶನ ಉದ್ಘಾಟನೆಗೊಳ್ಳಲಿದೆ.
ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮದ್ವರಾಜ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.