×
Ad

ಸರಕಾರದ ಸೌಲಭ್ಯವನ್ನು ಬಡ ಜನರ ಬಳಿಗೆ ಪ್ರಾಮಾಣಿಕವಾಗಿ ತಲುಪಿಸುವುದೇ ಜನಪ್ರತಿನಿಧಿಯ ಕೆಲಸ: ಬಿ.ಎ.ಮೊಯ್ದಿನ್‌

Update: 2017-12-21 23:18 IST

ಮಂಗಳೂರು, ಡಿ.21: ಬಡಜನರ, ದುರ್ಬಲರ, ಅಶಕ್ತರ, ರೋಗಿಗಳ ಸೇವೆ ಯನ್ನು ಪ್ರಮಾಣಿಕವಾಗಿ, ನಿಷ್ಠೆಯಿಂದ ಮಾಡುವುದು, ಸರಕಾರದ ಸೌಲಭ್ಯವನ್ನು ಬಡಜನರಿಗೆ ತಲುಪಿಸುವುದು ಜನಪ್ರತಿನಿಧಿಯ ಕೆಲಸ. ದಯೆ, ಪ್ರೀತಿ, ಕರುಣೆಯೊಂದಿಗೆ ಮಾನವರಾಗಿ ಬದುಕಬೇಕೆನ್ನುವುದೇ ಏಸು ಕ್ರಿಸ್ತರು ಈ ಜಗತ್ತಿಗೆ ನೀಡಿದ ಸಂದೇಶವೂ ಆಗಿದೆ ಎಂದು ಮಾಜಿ ಉನ್ನತ ಶಿಕ್ಷಣ ಸಚಿವ ಬಿ.ಎ.ಮೊಯ್ದಿನ್ ತಿಳಿಸಿದ್ದಾರೆ.

ನಗರದ ಕಂಕನಾಡಿ ಮೈದಾನದಲ್ಲಿ ಕರ್ನಾಟಕ ಸರಕಾರದ ವಿಧಾನ ಪಪರಿಷತ್‌ನ ಮುಖ್ಯ ಸಚೇತಕ ಐವನ್ ಡಿ ಸೋಜ ಅವರ ನೇತೃತ್ವದಲ್ಲಿ ಹಮ್ಮಿಕೊಂಡ 2ನೆ ವರ್ಷದ ಕ್ರಿಸ್ಮಸ್ ಆಚರಣೆಯ ಸಮಾರಂಭವನ್ನುದ್ದೇಶಿಸಿ ಅವರು ಇಂದು ಮಾತನಾಡುತ್ತಿದ್ದರು.

ಸಮಾಜದಲ್ಲಿ ನಾವೆಲ್ಲರೂ ಮಾನವೀಯ ಗುಣಗಳೊಂದಿಗೆ ಒಬ್ಬರನ್ನೊಬ್ಬರು ಅರಿತುಕೊಂಡು, ಕಷ್ಟದಲ್ಲಿರುವವರಿಗೆ ಪರಸ್ಪರ ಸಹಕಾರ ನೀಡುತ್ತಾ ಮಾನವರಾಗಿ ಬದುಕುವುದು ಹೊರತು ಬೇರೆ ಯಾವೂದು ಇಲ್ಲಿ ಮುಖ್ಯ ಅಲ್ಲ. ಈ ನಿಟ್ಟಿನಲ್ಲಿ ವಿಧಾನ ಪರಿಷತ್‌ನ ಮುಖ್ಯಸಚೇತಕನಾಗಿ ಅಯ್ಕೆಯಾದ ಐವನ್ ಡಿ ಸೋಜ ಮುಖ್ಯ ಮಂತ್ರಿ ಪರಿಹಾರ ನಿಧಿಯಿಂದ 6 ಕೋಟಿ ರೂ ಮೊತ್ತದ ಪರಿಹಾರವನ್ನು ಬಡವ, ರೋಗ ಪೀಡಿತರ ಮನೆ ಬಾಗಿಲಿಗೆ ತಂದು ಅವರಿಗೆ ತಲುಪಿಸಿರುವುದು ಶ್ಲಾಘನೀಯ ಎಂದರು.

ಮುಖ್ಯ ಸಚೇತಕ ಐವನ್ ಡಿ ಸೋಜ ಸ್ವಾಗತಿಸುತ್ತಾ, ಸರಕಾರದ ಮುಖ್ಯ ಸಚೇತಕನಾಗಿ ಎಲ್ಲಾ ಹಬ್ಬವನ್ನು ಆಚರಿಸುವ ಮೂಲಕ ಜನರನ್ನು ಒಂದುಗೂಡಿ ಸಬೇಕು ಎನ್ನುವ ಭಾವನೆಯಿಂದ ದೀಪಾವಳಿ, ಮೀಲಾದುನ್ನಬಿ, ಕ್ರಿಸ್ಮಸನ್ನು ಎಲ್ಲರೊಂದಿಗೆ ಆಚರಿಸಬೇಕು ಎಂದು ಆಪ್ತರೊಬ್ಬರು ಸಲಹೆ ನೀಡಿದ್ದನ್ನು ಅನುಸರಿಸಿದ್ದೇನೆ. ಅದರಿಂದ ಉತ್ತಮ ಪ್ರತಿಕ್ರೀಯತೆ ದೊರೆತಿದೆ. ಹಬ್ಬದ ಮೂಲಕ ಸೌರ್ಹಾದತೆ ವಿಸ್ತರಿಸಲಿ ಎನ್ನುವುದು ನನ್ನ ಆಶಯ ಎಂದು ಅವರು ಶುಭಹಾರೈಸಿದರು. ಸಮಾರಂಭದಲ್ಲಿ ಕ್ರೈಸ್ತ ಧರ್ಮ ಸಭಾದ ಪಾಲಕರಾದ ವಂ,ಪಾಲನ್ನಾ ಕ್ರಿಸ್ಮಸ್‌ನ ಸಂದೇಶವನ್ನು ನೀಡಿದರು. ಕರಾವಳಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಗಣೇಶ್ ರಾವ್ ಅಧ್ಯಕ್ಷತೆ ವಹಿಸಿದ್ದರು.

ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಮೊಯ್ದಿನ್ ಬಾವಾ, ಮನಪಾ ಮೇಯರ್ ಕವಿತಾ ಸನಿಲ್, ಮನಪಾ ಸದಸ್ಯರಾದ ನವೀನ್ ಡಿಸೋಜ, ನಾಗವೇಣಿ, ಅಪ್ಪಿ, ಸಬೀತಾ ಮಿಸ್ಕತ್, ಅಶೋಕ್ ಕುಮಾರ್, ಅಖಿಲ್ ಆಳ್ವಾ, ಪ್ರಕಾಶ್ ಸಾಲ್ಯಾನ್, ಕಾಂಗ್ರೆಸ್ ಮುಖಂಡರಾದ ಕೋಡಿಜಾಲ್ ಇಬ್ರಾಹೀಂ, ಸುರೇಂದ್ರ ಕಂಬಳಿ, ಎನ್.ಎಸ್.ಕರೀಂ, ಯು.ಪಿ.ಇಬ್ರಾಹೀಂ, ಅಮೃತ ಕದ್ರಿ, ಶಾಹುಲ್ ಹಮೀದ್ ಕದಿಕೆ, ಲೋಕೇಶ್ ಹೆಗ್ಡೆ, ಹೇಮನಾಥ ಶೆಟ್ಟಿ, ಅನಿತಾ ಹೇಮನಾಥ ಶೆಟ್ಟಿ, ಮುದಸೀರ್ ಕುದ್ರೋಳಿ, ಮುಹಮ್ಮದ್ ರಫೀಕ್ ಬೆಂಗ್ರೆ, ಗ್ರೆಟ್ಟಾ ರೆಬೆಲ್ಲೋ, ನಾಗೇಂದ್ರ, ಖಾದರ್ ಕುದ್ರೋಳಿ, ಮಾಜಿ ಮೇಯರ್ ಕೆ.ಅಶ್ರಫ್ ಇತರ ಗಣ್ಯರಾದ ಡಾ. ರಾಮಚಂದ್ರ, ಡಾ.ಕವಿತಾ ಡಿ ಸೋಜ, ಮಾರ್ಸೆಲ್ ಮೊಂತೆರೊ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಅನಂತ ಮೂರ್ತಿ ಅಸ್ರಣ್ಣ, ಭಾಸ್ಕರ ತೊಕ್ಕೊಟ್ಟು, ಜಯರಾಮ ಶೇಖ ಮೊದಲಾದವರು ಉಪಸ್ಥಿತರಿದ್ದರು.

ವಸಂತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News