ಡಿ. 24: ಎಸ್ ಎಸ್ ಎಫ್ ಬಂಟ್ವಾಳ ಡಿವಿಷನ್ ಪ್ರತಿಭೋತ್ಸವ
ಮಂಗಳೂರು, ಡಿ. 22: ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ ಫೆಡರೇಷನ್ ಎಸ್ಎಸ್ಎಫ್ ಬಂಟ್ವಾಳ ಡಿವಿಷನ್ ಪ್ರತಿಭೋತ್ಸವ ಕಾರ್ಯಕ್ರಮವು ಡಿ. 24 ರಂದು ಬಿಸಿ ರೋಡಿನ ಸ್ಪರ್ಶಾ ಹಾಲಿನಲ್ಲಿ ಡಿವಿಜನ್ ಅಧ್ಯಕ್ಷ ಅಬ್ದುಲ್ ರಶೀದ್ ವಗ್ಗ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಕೆಸಿಎಫ್ ಇಂಟರ್ನ್ಯಾಷನಲ್ ಸಮಿತಿಯ ಅಧ್ಯಕ್ಷ ಎಸ್ ಪಿ ಹಂಝ ಸಖಾಫಿ ಉಸ್ತಾದ್ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಎನ್ ಕೆ ಎಂ ಶಾಫಿ ಸಅದಿ ಬೆಂಗಳೂರು, ಸಿರಾಜುದ್ದೀನ್ ಸಖಾಫಿ ಕನ್ಯಾನ, ಅಬೂಸ್ವಾಲಿಹ್ ಉಸ್ತಾದ್, ಹಂಝ ಮದನಿ ಮಿತ್ತೂರು, ಮುಹಮ್ಮದ್ ಅಲಿ ಸಖಾಫಿ, ಅಶ್ರಫ್ ಸಖಾಫಿ ಆಲಡ್ಕ, ಇಬ್ರಾಹಿಮ್ ಸಖಾಫಿ ಸೆರ್ಕಳ,ಖಲೀಲ್ ಮುಸ್ಲಿಯಾರ್ ಬೋಳಂತೂರು, ಅಬ್ದುಲ್ ಬಶೀರ್ ಮಿತ್ತಬೈಲು, ಅಬ್ದುಲ್ಲ ಕೊಳಕೆ, ಇಸ್ಮಾಯಿಲ್ ನಾವೂರು,ಕಲಂದರ್ ಪದ್ಮುಂಜ, ಅಲಿ ತುರ್ಕಳಿಕೆ, ಶರೀಫ್ ನಂದಾವರ, ಹಂಝ ಮೈಂದಾಳ ಹಾಗೂ ಇನ್ನಿತರ ಉಲಮಾ, ಉಮರಾ ನಾಯಕರು ಭಾಗವಹಿಸಲಿದ್ದಾರೆ ಎಂದು ಎಸ್ ಎಸ್ ಎಫ್ ಬಂಟ್ವಾಳ ಡಿವಿಷನ್ ಮಾಧ್ಯಮ ಕಾರ್ಯದರ್ಶಿ ಹಾರಿಸ್ ಪೆರಿಯಪಾದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.