ಡಿ. 23ರಂದು ಜಮೀಯತೆ ಅಹ್ಲೆ ಹದೀಸ್ ವತಿಯಿಂದ ಪ್ರವಚನ
Update: 2017-12-22 22:18 IST
ಉಡುಪಿ, ಡಿ.22: ಉಡುಪಿ ಜಿಲ್ಲಾ ಜಮೀಯತೆ ಅಹ್ಲೆ ಹದೀಸ್ ಅಧೀನ ದಲ್ಲಿ ಇಸ್ಲಾಮಿಕ್ ದಾವಾ ಸೆಂಟರ್ ಹೂಡೆ ವತಿಯಿಂದ ‘ಪರೆಶಾನಿಯೊ ಸೆ ನಜಾತ್ ಕೈಸೆ?’ ಎಂಬ ವಿಷಯದ ಕುರಿತು ಪ್ರವಚನ ಕಾರ್ಯಕ್ರಮವು ಡಿ. 23ರಂದು ರಾತ್ರಿ 9ಗಂಟೆಯಿಂದ 10:30ರವರೆಗೆ ನಡೆಯಲಿದೆ.
ಹೂಡೆ ಸರಕಾರಿ ಉರ್ದು ಶಾಲಾ ಮೈದಾನದಲ್ಲಿ ನಡೆಯುವ ಕಾರ್ಯ ಕ್ರಮದಲ್ಲಿ ಇಸ್ಲಾಮಿನ ವಿದ್ವಾಂಸ ಶೇಕ್ ಝಫರುಲ್ ಹಸನ್ ಮದನಿ ಶಾರ್ಜಾ ಪ್ರವಚನ ನೀಡಲಿರುವರು ಎಂದು ಪ್ರಕಟಣೆ ತಿಳಿಸಿದೆ.