ಬೈಂದೂರು: ಡಿ.24ರಿಂದ ಸಿಪಿಎಂ ಜಿಲ್ಲಾ ಸಮ್ಮೇಳನ
ಬೈಂದೂರು, ಡಿ.22: ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)ದ 6ನೇ ಉಡುಪಿ ಜಿಲ್ಲಾ ಸಮ್ಮೇಳನವು ಸೌಹಾರ್ದ, ಸಹಬಾಳ್ವೆ ಮತ್ತು ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಎಂಬ ಘೋಷ ವಾಕ್ಯದೊಂದಿಗೆ ಡಿ.24ರಿಂದ 26ವರೆಗೆ ಬೈಂದೂರಿನಲ್ಲಿ ನಡೆಯಲಿದೆ.
22ನೇ ಅಖಿಲ ಭಾರತ ಅಧಿವೇಶನವು ಮುಂದಿನ ಎಪ್ರಿಲ್ ತಿಂಗಳಲ್ಲಿ ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಹಿನ್ನಲೆಯಲ್ಲಿ ಸಿಪಿಎಂ ಪಕ್ಷದ ಎಲ್ಲಾ ಹಂತದ ಸಮ್ಮೇಳನವು ನಡೆಯುತ್ತಿದ್ದು ರಾಜ್ಯ ಸಮ್ಮೇಳನವು ಜನವರಿ 2ರಿಂದ 5ರವರೆಗೆ ಮೂಡಬಿದೆಯಲ್ಲಿ ನಡೆಯಲಿದೆ.
ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಭಾಗವಾಗಿದ್ದ ಉಡುಪಿ ಜಿಲ್ಲೆಯಲ್ಲಿ ಸ್ವಾತಂತ್ರ ಪೂರ್ವದಲ್ಲೇ ಸ್ವಾತಂತ್ರ್ಯ ಹೋರಾಟದ ಜತೆಯಲ್ಲಿ ಬೀಡಿ, ಹಂಚು, ನೇಯ್ಗೆ, ಗೋಡಂಬಿ ಕೈಗಾರಿಕೆಗಳಲ್ಲಿ ಕಮ್ಯೂನಿಸ್ಟ್ ಪಕ್ಷದ ನೇತೃತ್ವದಲ್ಲಿ ಕಾರ್ಮಿಕ ರನ್ನು ಸಂಘಟಿಸಲಾಗುತ್ತಿತ್ತು. 1940ರಲ್ಲೇ ಕೂಲಿ ಹೆಚ್ಚಳಕ್ಕೆ ಒತ್ತಾಯಿಸಿ ನೇಯ್ಗೆ ಕಾರ್ಮಿಕರು ಮುಷ್ಕರ ನಡೆಸಿದ್ದರು.
ಅವಿಜಿತದಕ್ಷಿಣಕನ್ನಡಜಿಲ್ಲೆಯಾಗವಾಗಿದ್ದ ಉಡುಪಿ ಜಿಲ್ಲೆಯಲ್ಲಿ ಸ್ವಾತಂತ್ರ ಪೂರ್ವದಲ್ಲೇ ಸ್ವಾತಂತ್ರ್ಯ ಹೋರಾಟದ ಜತೆಯಲ್ಲಿ ಬೀಡಿ, ಹಂಚು, ನೇಯ್ಗೆ, ಗೋಡಂಬಿ ಕೈಗಾರಿಕೆಗಳಲ್ಲಿ ಕಮ್ಯೂನಿಸ್ಟ್ ಪಕ್ಷದ ನೇತೃತ್ವದಲ್ಲಿ ಕಾರ್ಮಿಕ ರನ್ನು ಸಂಘಟಿಸಲಾಗುತ್ತಿತ್ತು. 1940ರಲ್ಲೇ ಕೂಲಿ ಹೆಚ್ಚಳಕ್ಕೆ ಒತ್ತಾಯಿಸಿ ನೇಯ್ಗೆ ಕಾರ್ಮಿಕರು ಮುಷ್ಕರ ನಡೆಸಿದ್ದರು. ಸ್ವಾತಂತ್ರಾ ನಂತರ ಪಾನ ನಿಷೇಧ ಮಾಡಿದ ಅಂದಿನ ಕಾಂಗ್ರೆಸ್ ಸರಕಾರದ ವಿರುದ್ಧ ಆಗಿನ ಕಮ್ಯೂನಿಸ್ಟ್ ನೇತಾರ ಎಂ.ಹೆಚ್. ಕೃಷ್ಣಪ್ಪನೇತೃತ್ವದಲ್ಲಿ ಮೂರ್ತೆದಾರರನ್ನು ಸಂಘಟಿಸಿ ನೀರಾ ಇಳಿಸುವ ಹಕ್ಕನ್ನು ಪಡೆದುಕೊಳ್ಳಲಾಗಿತ್ತು. ಇಂದು ಸಹ ಬಂಡವಾಳಶಾಹಿ ಪದ್ದತಿ ಅಡಿಯಲ್ಲಿ ರೈತ, ಕಾರ್ಮಿಕರ ಬದುಕು ಹಸನಾಗಿಲ್ಲ. ಜೊತೆಯಲ್ಲಿ ಬೆಳೆಯುತ್ತಿರುವ ಕೋಮುವಾದ ಜನರ ನಡುವೆ ದ್ವೇಷದ ವಿಷ ಬೀಜ ಬಿತ್ತುತ್ತಿದ್ದು ಅಪಾಯಕಾರಿ ಹಂತ ತಲುಪಿದೆ.
ಇಂಥ ಸಂದರ್ದಲ್ಲಿ ನಡೆಯುತ್ತಿರುವ ಸಿಪಿಎಂ ಸಮ್ಮೇಳನವನ್ನು ಪಕ್ಷದ ರಾಜ್ಯ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಜಿ.ವಿ. ಶ್ರೀರಾಮ ರೆಡ್ಡಿ ಉದ್ಘಾಟಿಸಲಿದ್ದಾರೆ. ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಹಾಗೂ ದ.ಕ. ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಭಾಗವಹಿಸಲಿದ್ದಾರೆ. 26ರಂದು ಬೈಂದೂರಿನಲ್ಲಿ ನಡೆಯುವ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಜಿ.ವಿ. ಶ್ರೀರಾಮ ರೆಡ್ಡಿ, ರಾಜ್ಯ ಮುಖಂಡರಾದ ಕೆ. ಶಂಕರ್ ಮತ್ತು ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಮಾತನಾಡಲಿದ್ದಾರೆ ಎಂದು ಸ್ವಾಗತ ಸಮಿತಿ ಪ್ರಕಟಣೆ ತಿಳಿಸಿದೆ.