×
Ad

ಅಮೆರಿಕದ ‘ಅಪಾಯಕಾರಿ ದೇಶ’ಗಳ ಪಟ್ಟಿಯಲ್ಲಿ ಪಾಕಿಸ್ತಾನ: ಮೈಕ್ ಪೆನ್ಸ್

Update: 2017-12-22 22:42 IST

ವಾಶಿಂಗ್ಟನ್, ಡಿ. 22: ತಾಲಿಬಾನ್ ಮತ್ತು ಇತರ ಭಯೋತ್ಪಾದಕ ಸಂಘಟನೆಗಳಿಗೆ ತನ್ನ ನೆಲದಲ್ಲಿ ಸುರಕ್ಷಿತ ಆಶ್ರಯತಾಣ ಒದಗಿಸಿರುವುದಕ್ಕಾಗಿ ಆ ದೇಶವನ್ನು ‘ಎಚ್ಚರಿಕೆ ಇಡಬೇಕಾದ ದೇಶಗಳ ಪಟ್ಟಿ’ಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಿಸಿದ್ದಾರೆ ಎಂದರು ಅಮೆರಿಕದ ಉಪಾಧ್ಯಕ್ಷ ಮೈಕ್ ಪೆನ್ಸ್ ಹೇಳಿದ್ದಾರೆ.

‘‘ತುಂಬಾ ಸಮಯದಿಂದ ಪಾಕಿಸ್ತಾನ ತಾಲಿಬಾನ್ ಮತ್ತು ಇತರ ಹಲವಾರು ಭಯೋತ್ಪಾದಕ ಸಂಘಟನೆಗಳಿಗೆ ಸುರಕ್ಷಿತ ಆಶ್ರಯತಾಣಗಳನ್ನು ಒದಗಿಸುತ್ತಿದೆ. ಆದರೆ, ಈಗ ಆ ದಿನಗಳು ಮುಗಿದಿವೆ’’ ಎಂದು ಅಫ್ಘಾನಿಸ್ತಾನಕ್ಕೆ ಅಘೋಷಿತ ಭೇಟಿ ನೀಡಿದ ಬಳಿಕ ಬಗ್ರಾಮ್ ವಾಯುನೆಲೆಯಲ್ಲಿ ಅಮೆರಿಕದ ಸೈನಿಕರನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

‘‘ಅಧ್ಯಕ್ಷರು ಹೇಳಿರುವುದನ್ನು ಈಗ ನಾನು ಹೇಳುತ್ತಿರುವೆ: ಅಮೆರಿಕದ ಜೊತೆ ಕೈಜೋಡಿಸಿದರೆ ಪಾಕಿಸ್ತಾನಕ್ಕೆ ತುಂಬಾ ಪ್ರಯೋಜನಗಳಿವೆ ಹಾಗೂ ಕ್ರಿಮಿನಲ್‌ಗಳು ಮತ್ತು ಭಯೋತ್ಪಾದಕರ ಜೊತೆಗಿನ ಸ್ನೇಹವನ್ನು ಮುಂದುವರಿಸಿದರೆ ಅದು ಕಳೆದುಕೊಳ್ಳಬೇಕಾಗಿರುವುದು ತುಂಬಾ ಇದೆ’’ ಎಂದು ಅಮೆರಿಕದ ಉಪಾಧ್ಯಕ್ಷರು ಹೇಳಿದರು.

‘‘ನಮ್ಮ ಸಶಸ್ತ್ರ ಪಡೆಗಳ ಪರಿಣಾಮವನ್ನು ಸೀಮಿತಗೊಳಿಸುವ ನಿರ್ಬಂಧಗಳನ್ನು ನಾವು ತೆರವುಗೊಳಿಸಿದ್ದೇವೆ. ಹಾಗಾಗಿ, ಅಧ್ಯಕ್ಷರು ಹೇಳಿರುವಂತೆ, ಶತ್ರುವಿನ ವಿರುದ್ಧ ಪೂರ್ಣ ಪ್ರಮಾಣದಲ್ಲಿ ಹಾಗೂ ಕ್ಷಿಪ್ರವಾಗಿ ಯುದ್ಧ ಮಾಡಬಹುದು’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News