×
Ad

ಜಲ್ಲಿಗುಡ್ಡೆಯಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ

Update: 2017-12-22 23:39 IST

ಮಂಗಳೂರು, ಡಿ. 22: ಸೌತ್ ಕರ್ನಾಟಕ ಸಲಫಿ ಮೂವ್‍ಮೆಂಟ್ ಬಜಾಲ್ ಘಟಕ ಮತ್ತು ಡೆಲ್ಟಾ ಕಣ್ಣಿನ ಆಸ್ಪತ್ರೆ ಬೆಂದೂರ್‍ವೆಲ್ ಮಂಗಳೂರು ಇವುಗಳ ಜಂಟಿ ಆಶ್ರಯದಲ್ಲಿ ಜಲ್ಲಿಗುಡ್ಡೆ ಜಂಕ್ಷನ್‍ನಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವು ಜರಗಿತು.

ಡೆಲ್ಟಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸಜ್ಜಾದ್ ಅಹ್ಮದ್ ರವರ ನೇತ್ರತ್ವದಲ್ಲಿ ಡಾ. ವಿಜಯ್ ಮತ್ತು ತಂಡದವರು ನೇತ್ರ ತಪಾಸಣೆ ಮಾಡಿದರು. ಶಿಬಿರದಲ್ಲಿ ಸುಮಾರು 160 ಮಂದಿಯ ನೇತ್ರ ತಪಾಸಣೆ ನಡೆಸಲಾಯಿತು. ಸುಮಾರು 82 ಮಂದಿಗೆ ಉಚಿತ ಕನ್ನಡಕ ವಿತರಿಸಲಾಯಿತು.

ಸಲಫಿ ಮೂವ್‍ಮೆಂಟ್‍ನ ಕೇಂದ್ರ ಸಮಿತಿ ಅಧ್ಯಕ್ಷ ಯು.ಎನ್. ಅಬ್ದುಲ್ ರಝಾಕ್, ಜತೆ ಕಾರ್ಯದರ್ಶಿ ಎಂ.ಜಿ. ಮುಹಮ್ಮದ್, ಕಾರ್ಪೋರೇಟರ್ ಸುಮಯ್ಯಬಾನು ಮುಂತಾದವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಎಸ್.ಕೆ.ಎಸ್.ಎಂ.ನ ಬಜಾಲ್ ಘಟಕದ ಅಧ್ಯಕ್ಷ ಅಬ್ದುಲ್ ರಹಿಮಾನ್ ಸ್ವಾಗತಿಸಿ, ಮುನೀರ್ ಬಜಾಲ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News