ಸಯೀದ್ ರಾಜಕೀಯ ಪಕ್ಷಕ್ಕೆ ಮಾನ್ಯತೆ ಬೇಡ: ನ್ಯಾಯಾಲಯಕ್ಕೆ ಪಾಕ್ ಸರಕಾರ ಮನವಿ

Update: 2017-12-23 14:35 GMT

ಇಸ್ಲಾಮಾಬಾದ್, ಡಿ. 23: ರಾಜಕೀಯ ಪಕ್ಷವಾಗಿ ನೋಂದಾಯಿಸಬೇಕೆಂದು ಕೋರಿ ಮುಂಬೈ ಭಯೋತ್ಪಾದಕ ದಾಳಿಯ ರೂವಾರಿ ಹಫೀಝ್ ಸಯೀದ್ ಪ್ರಾಯೋಜಕತ್ವದ ಮಿಲಿ ಮುಸ್ಲಿಮ್ ಲೀಗ್ ಸಲ್ಲಿಸಿರುವ ಮನವಿಯನ್ನು ಪರಿಗಣಿಸದಂತೆ ಪಾಕಿಸ್ತಾನ ಸರಕಾರವು ನ್ಯಾಯಾಲಯಕ್ಕೆ ಮನವಿ ಮಾಡಿದೆ. ಈ ಗುಂಪು ರಾಜಕೀಯದಲ್ಲಿ ಹಿಂಸೆ ಮತ್ತು ಉಗ್ರವಾದವನ್ನು ಬೆಳೆಸುತ್ತದೆ ಎಂದು ಅದು ಹೇಳಿದೆ.

2018ರ ಸಂಸದೀಯ ಚುನಾವಣೆಯಲ್ಲಿ ತನ್ನ ಸಂಘಟನೆ ಜಮಾಅತುದಅವಾ (ಜೆಯುಡಿ) ಮಿಲಿ ಮುಸ್ಲಿಮ್ ಲೀಗ್ (ಎಂಎಂಎಲ್) ಹೆಸರಿನಲ್ಲಿ ಸ್ಪರ್ಧಿಸುತ್ತದೆ ಎಂದು ಸಯೀದ್ ಈ ತಿಂಗಳ ಆರಂಭದಲ್ಲಿ ಹೇಳಿರುವುದನ್ನು ಸ್ಮರಿಸಬಹುದಾಗಿದೆ.

ಮಿಲಿ ಮುಸ್ಲಿಮ್ ಲೀಗ್‌ನ್ನು ರಾಜಕೀಯ ಪಕ್ಷವಾಗಿ ನೋಂದಾಯಿಸಲು ಪಾಕಿಸ್ತಾನದ ಚುನಾವಣಾ ಆಯೋಗವು ನಿರಾಕರಿಸಿತ್ತು. ಆಯೋಗದ ಈ ಆದೇಶವನ್ನು ಎಂಎಂಎಲ್ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು.

ಮಿಲಿ ಮುಸ್ಲಿಮ್ ಲೀಗ್ ನಿಷೇಧಿತ ಸಂಘಟನೆಗಳ ಶಾಖೆಯಾಗಿರುವುದರಿಂದ ಅದನ್ನು ರಾಜಕೀಯ ಪಕ್ಷವಾಗಿ ನೋಂದಾಯಿಸಬಾರದು ಎಂದು ಇಸ್ಲಾಮಾಬಾದ್ ಹೈಕೋರ್ಟ್‌ಗೆ ಸಲ್ಲಿಸಿದ ಲಿಖಿತ ಹೇಳಿಕೆಯಲ್ಲಿ ಆಂತರಿಕ ಸಚಿವಾಲಯ ಹೇಳಿದೆ.

ಎಂಎಂಎಲ್‌ನ ಅರ್ಜಿಯನ್ನು ಪರಿಗಣಿಸಬಾರದು ಹಾಗೂ ಅದನ್ನು ವಜಾಗೊಳಿಸಬೇಕು ಎಂಬುದಾಗಿ ಸರಕಾರ ನ್ಯಾಯಾಲಯಕ್ಕೆ ಮನವಿ ಮಾಡಿದೆ ಎಂದು ‘ಡಾನ್’ ಪತ್ರಿಕೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News