×
Ad

ಫಿಲಿಪ್ಪೀನ್ಸ್‌ನಲ್ಲಿ ಭೂಕುಸಿತ: 100ಕ್ಕೂ ಅಧಿಕ ಸಾವು

Update: 2017-12-23 20:43 IST

ಮನಿಲಾ (ಫಿಲಿಪ್ಪೀನ್ಸ್), ಡಿ. 23: ದಕ್ಷಿಣ ಫಿಲಿಪ್ಪೀನ್ಸ್‌ನಲ್ಲಿ ಬೀಸಿದ ಚಂಡಮಾರುತದ ಪ್ರಭಾವದಿಂದ ಸಂಭವಿಸಿದ ಭೂಕುಸಿತಗಳು ಮತ್ತು ದಿಢೀರ್ ಪ್ರವಾಹಗಳಲ್ಲಿ 100ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ಶನಿವಾರ ಹೇಳಿದ್ದಾರೆ.

ಅದೇ ವೇಳೆ, ಡಝನ್‌ಗಟ್ಟಳೆ ಮಂದಿ ನಾಪತ್ತೆಯಾಗಿದ್ದಾರೆ.

ದಕ್ಷಿಣದ ದ್ವೀಪ ಮಿಂಡನಾವೊದಲ್ಲಿ ಶುಕ್ರವಾರ ರಾತ್ರಿ ಈ ಎಲ್ಲ ಸಾವು-ನೋವುಗಳು ಸಂಭವಿಸಿವೆ. ದ್ವೀಪದ ಮೂರು ರಾಜ್ಯಗಳು ಹೆಚ್ಚಿನ ಆಘಾತಕ್ಕೆ ಒಳಗಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News