ಸಾಲಿಗ್ರಾಮ: ಪಟ್ಟಣ ಪಂಚಾಯತ್‌ನಲ್ಲಿ ಬಾರ್ ಪರವಾನಿಗೆ ಗದ್ದಲ

Update: 2017-12-23 15:50 GMT

ಸಾಲಿಗ್ರಾಮ, ಡಿ.23: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಚಿತ್ರಪಾಡಿ ಮಾರಿಗುಡಿ ಬಳಿ ಸ್ಥಳೀಯರು ಹಾಗೂ ಸಾರ್ವಜನಿಕರ ತೀವ್ರ ಪ್ರತಿರೋಧದ ನಡುವೆಯೂ ತೆರೆಯಲಾದ ಬಾರ್ ಒಂದಕ್ಕೆ ನೀಡಲಾದ ಪರವಾನಿಗೆ ಕುರಿತಂತೆ ಚರ್ಚಿಸಲು ಶನಿವಾರ ಕರೆಯಲಾದ ವಿಶೇಷ ತುರ್ತು ಸಭೆಯು ಕೋಲಾಹಲ ಹಾಗೂ ಗದ್ದಲದ ಗೂಡಾಗಿದ್ದು, ಸದಸ್ಯರ ಪ್ರಾಮಾಣಿಕತೆ ಪರೀಕ್ಷೆಗೆ ಆಂಜನೇಯ ಹಾಗೂ ಭಗವದ್ಗೀತೆ ಪುಸ್ತಕಗಳೂ ಪ್ರತ್ಯಕ್ಷವಾದವು.

ಬಾರ್ ಅನುಮತಿ ವಿಚಾರದಲ್ಲಿ ಸಾರ್ವಜನಿಕ ವಲಯದಲ್ಲಿ ಪಟ್ಟಣ ಪಂಚಾಯತ್‌ನವರು ಹಣ ಪಡೆದಿದ್ದಾರೆ ಎಂಬ ಗುಮಾನಿ ಹುಟ್ಟಿಕೊಂಡಿದೆ. ಆದ್ದರಿಂದ ಭಗವದ್ಗೀತೆ ಮೇಲೆ ಪ್ರಮಾಣ ಮಾಡಿ ಎಂದು ಪ್ರತಿಪಕ್ಷದ ನಾಯಕ ಹೇಳಿದ ತಕ್ಷಣ ಸಭೆಯಲ್ಲಿ ಗದ್ದಲವೇರ್ಪಟ್ಟಿತು. ಈ ವಿಚಾರವಾಗಿ ವಾದ- ವಿವಾದಗಳು ಮುಂದುವರಿದು, ಕೊನೆಗೆ ಅಧ್ಯಕ್ಷೆ ಮತ್ತು ಮುಖ್ಯಾಧಿಕಾರಿಗಳು ತಪ್ಪಿತಸ್ಥರು, ಅಧ್ಯಕ್ಷರ ಪದಚ್ಯುತಿ ಹಾಗೂ ಮುಖ್ಯಾಧಿಕಾರಿಗಳ ಅಮಾನತು ಆಗಬೇಕೆಂದು ಪ್ರತಿಪಕ್ಷದ ಸದಸ್ಯರು ಆಗ್ರಹಿಸಿದರು.

ಬಾರ್ ಅನುಮತಿ ವಿಚಾರದಲ್ಲಿ ಸಾರ್ವಜನಿಕ ವಲಯದಲ್ಲಿ ಪಟ್ಟಣ ಪಂಚಾಯತ್‌ನವರು ಹಣ ಪಡೆದಿದ್ದಾರೆ ಎಂಬ ಗುಮಾನಿ ಹುಟ್ಟಿಕೊಂಡಿದೆ. ಆದ್ದರಿಂದ ಗವದ್ಗೀತೆಮೇಲೆಪ್ರಮಾಣಮಾಡಿಎಂದುಪ್ರತಿಪಕ್ಷದನಾಯಕಹೇಳಿದತಕ್ಷಣಸೆಯಲ್ಲಿ ಗದ್ದಲವೇರ್ಪಟ್ಟಿತು. ಈ ವಿಚಾರವಾಗಿ ವಾದ- ವಿವಾದಗಳು ಮುಂದುವರಿದು, ಕೊನೆಗೆ ಅ್ಯಕ್ಷೆಮತ್ತುಮುಖ್ಯಾಧಿಕಾರಿಗಳುತಪ್ಪಿತಸ್ಥರು,ಅ್ಯಕ್ಷರ ಪದಚ್ಯುತಿ ಹಾಗೂ ಮುಖ್ಯಾಧಿಕಾರಿಗಳ ಅಮಾನತು ಆಗಬೇಕೆಂದು ಪ್ರತಿಪಕ್ಷದ ಸದಸ್ಯರು ಆಗ್ರಹಿಸಿದರು.

ಚಿತ್ರಪಾಡಿ ಮಾರಿಗುಡಿ ಮುಂಭಾಗದಲ್ಲಿ ಬಾರ್ ಪ್ರಾರಂಭಕ್ಕೆ ಸಾಲಿಗ್ರಾಮ ಪಟ್ಟಣ ಪಂಚಾಯತ್ ಎನ್‌ಒಸಿ ನೀಡಿರುವುದು, ಎರಡು ದಿನಗಳ ಹಿಂದೆ ಸಾರ್ವಜನಿಕರು ನಡೆಸಿದ ಪ್ರತಿಭಟನೆಯ ವೇಳೆ ಗೊತ್ತಾಗಿದ್ದು, ಈ ವಿಚಾರದಲ್ಲಿ ಚರ್ಚಿಸಿ ಸ್ಪಷ್ಟ ನಿರ್ಣಯ ಕೈಗೊಳ್ಳಲು ಶನಿವಾರ ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ ವಿಶೇಷ ತುರ್ತು ಸಭೆ ಕರೆಯಲಾಗಿತ್ತು.

ಸಭೆಯ ಪ್ರಾರಂಭದಲ್ಲಿ ಸದಸ್ಯ ರಾಘವೇಂದ್ರ ಗಾಣಿಗ, ಹಿಂದಿನ ಸಭೆಯ ಕಾರ್ಯಸೂಚಿ ಹಾಗೂ ಪ್ರಸ್ತಾಪದ ಕುರಿತು ಪ್ರಶ್ನೆಯನ್ನೆತ್ತಿದರು. ಈ ವಿಚಾರವನ್ನೇ ಎತ್ತಿಕೊಂಡ ಪ್ರತಿಪಕ್ಷದ ನಾಯಕ ಶ್ರೀನಿವಾಸ ಅಮೀನ್, ಮುಖ್ಯಾಧಿಕಾರಿಗಳು ಈ ಬಾರ್‌ಗೆ ಯಾವ ಆಧಾರದ ಮೇಲೆ ಎನ್‌ಒಸಿ ನೀಡಿದ್ದಾರೆಂದು ಮೊದಲು ಸ್ಪಷ್ಟ ಪಡಿಸಲಿ ಎಂದರು. ಸಾರ್ವಜನಿಕವಾಗಿ ಜನರು ನಮ್ಮನ್ನು ಕಳ್ಳರಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಬಿಂಬಿಸುತ್ತಿದ್ದಾರೆ. ಸದಸ್ಯರಾಗಿ ನಮಗೆ ಇರುವ ಮರ್ಯಾದೆಯನ್ನು ಬೀದಿಯಲ್ಲಿ ಹರಾಜು ಹಾಕುವ ಕೆಲಸ ಮಾಡಿದ್ದೀರಿ ಎಂದು ದೂರಿದರು.

ಇದೇ ಮಾತಿಗೆ ನಾಮ ನಿರ್ದೇಶಿತ ಸದಸ್ಯ ಅಚ್ಚುತ ಪೂಜಾರಿ ಭಗವದ್ಗೀತೆ ಪುಸ್ತಕವನ್ನು ಎತ್ತಿ ಹಿಡಿದು ಸಾಲಿಗ್ರಾಮ ಪಟ್ಟಣ ಪಂಚಾಯತ್ ಸದಸ್ಯನಾದ ನಾನು ಯಾವ ಕೆಲಸಕ್ಕೂ ಯಾರಿಂದಲೂ ಹಣ ಪಡೆದಿಲ್ಲ ಎಂದು ಭಗವದ್ಗೀತೆ ಮುಟ್ಟಿ ಪ್ರಮಾಣ ಮಾಡಿ, ಉಳಿದವರು ಹಣ ಪಡೆಯದೆ ಇದ್ದರೆ ಪ್ರಮಾಣ ಮಾಡಿ ಎಂದು ಸವಾಲು ಹಾಕಿದರು. ಇದೇ ವಿಚಾರವಾಗಿ ಭಾವೋದ್ವೇಗಕ್ಕೆ ಒಳಗಾದ ಬಿಜೆಪಿ ಸದಸ್ಯ ಕಾರ್ಕಡ ರಾಜು ಪೂಜಾರಿ ಕೋಪಗೊಂಡು ಕೂಗಾಡುತ್ತಾ, ಭಗವದ್ಗೀತೆ ಕಸಿದುಕೊಂಡು ಹೋಗಿ, ನಾವು ಹಣ ಪಡೆದಿಲ್ಲ ಎಂದು ಟೇಬಲ್ ಮೇಲೆ ಭಗವದ್ಗೀತೆಯನ್ನು ಎಸೆದರು. ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ನಡುವೆ ಮಾತಿನ ಚಕುಮಕಿ ನಡೆಯಿತು. ನಾವು ಹಣ ಪಡೆದಿಲ್ಲ ಈ ರಾಜಕೀಯ ಮಾಡುವುದು ಬೇಡ ಎಂದು ಆಡಳಿತ ಪಕ್ಷದ ಸದಸ್ಯರು, ನೀವು ಹಣ ಪಡೆಯದೆ ಇದ್ದರೆ ಮುಟ್ಟಿ ಪ್ರಮಾಣ ಮಾಡಿ ಎಂದು ಪ್ರತಿಪಕ್ಷದ ಸದಸ್ಯರು ವಾಗ್ವಾದ ನಡೆಸಿದರು.

ಬಳಿಕ ಮಾತನಾಡಿದ ಶ್ರೀನಿವಾಸ ಅಮೀನ್, ಇದು ಪಟ್ಟಣ ಪಂಚಾಯತ್ ಗೆ ಕಪ್ಪುಚುಕ್ಕಿಯಾಗಿದೆ. ಅಧ್ಯಕ್ಷೆ ರತ್ನಾ ಗಾಣಿಗ ಸಭೆಯಲ್ಲಿ 14 ಸದಸ್ಯರು ನಿರ್ಣಯ ಕೈಗೊಂಡ ಬಳಿಕ ಬಾರ್‌ಗೆ ಅನುಮತಿ ನೀಡಲಾಗಿದೆ ಎನ್ನುವ ಹೇಳಿಕೆ ಯನ್ನು ಸಾರ್ವಜನಿಕವಾಗಿ ನೀಡಿದ್ದಾರೆ. ಮುಖ್ಯಾಧಿಕಾರಿಗಳು ಎಲ್ಲ ನಿಯಮ ಗಳನ್ನು ಮರೆತು ಅಕ್ಷೇಪ ಇರುವ ಬಾರ್‌ಗೆ ಅನುಮತಿ ನೀಡಿ ಹಕ್ಕುಚ್ಯುತಿ ಮಾಡಿದ್ದಾರೆ ಎಂದು ಆಂಜನೇಯನ ಪೋಟೋ ಹಿಡಿದು ಪ್ರಮಾಣ ಮಾಡುವಂತೆ ಆಕ್ರೋಶ ವ್ಯಕ್ತಪಡಿಸಿದರು.

ಇದೇ ವಿಚಾರವಾಗಿ ವಾರ್ಡ್ ಸದಸ್ಯರಾದ ಕರುಣಾಕರ ಪೂಜಾರಿ, ಸುಲತಾ ಹೆಗ್ಡೆ, ರಾಘವೇಂದ್ರ ಗಾಣಿಗ, ಭೋಜ ಪೂಜಾರಿ, ಮಹಾಬಲ ಮಡಿವಾಳ, ಅಚ್ಚುತ ಪೂಜಾರಿ, ದಿನೇಶ್ ಬಂಗೇರ ಇವರುಗಳ ನಡುವೆ ವಾಕ್ಸಮರ ನಡೆಯಿತು.

ಮಾಜಿ ಅಧ್ಯಕ್ಷೆ ಸಾಧು ಪಿ. ಮಾತನಾಡಿ, ಊರಿನ ಜನಸ್ನೇಹಿ ವೈದ್ಯರ ಮನೆಯ ಪಕ್ಕದಲ್ಲಿ ಬಾರ್ ತೆರೆದಿರುವ ಕಾರಣ ರಾತ್ರಿ ಮನೆಯಲ್ಲಿ ಚಿಕಿತ್ಸೆ ನೀಡುವುದಿಲ್ಲ ಎಂದು ಘೋಷಿಸಿದ್ದಾರೆ. ಇದರಿಂದ ಬಡವರಿಗೆ, ಆಸುಪಾಸಿ ನವರಿಗೆ ತೊಂದರೆಯಾಗುತ್ತಿದೆ. ಆದುದರಿಂದ ಬಾರ್ ಬೇಡ ಎಂದರು. ಸುಲತಾ ಹೆಗ್ಡೆ ಅಬಕಾರಿ ಆಕ್ಟ್ ಬಗ್ಗೆ ಮಾಹಿತಿ ನೀಡುವಂತೆ ಕೋರಿದರು. ಅಬಕಾರಿ ಇಲಾಖೆಯ ಅಧಿಕಾರಿ ಜ್ಯೋತಿ ಮಾಹಿತಿ ನೀಡಿ, 100ಮೀ. ವ್ಯಾಪ್ತಿಯಲ್ಲಿ ಎಂಡೊಮೆಂಟ್ ದೇವಸ್ಥಾನ ಇದ್ದರೆ ಮಾತ್ರ ಅನುಮತಿ ನೀಡಲಾಗುವುದಿಲ್ಲ ಎಂದರು.

ಸಭೆಯಲ್ಲಿ ಉಪಸ್ಥಿತರಿದ್ದ ಡಾ.ಪಿ.ಸಿ. ಸುಧಾಕರ್ ಮಾತನಾಡಿ, ನಿಮ್ಮ 100 ಮೀ. ವ್ಯಾಪ್ತಿ ವೈಜ್ಞಾನಿಕವಾಗಿಲ್ಲ,ಜಿಪಿಎಸ್ ವ್ಯಾಪ್ತಿಯಾಗಿದೆ ಎಂದರು. ಮಾರಿಗುಡಿ ಪಕ್ಕದಲ್ಲಿ ಬಾರ್‌ಗೆ ಅನುಮತಿ ನೀಡಿರುವುದರಿಂದ ಹಿಂದೂ ಭಾವನೆಗೆ ಧಕ್ಕೆಯಾಗಿದೆ ಎಂದು ಶ್ರೀನಿವಾಸ ಅಮೀನ್ ಹೇಳಿದರು. ದಿನೇಶ್ ಬಂಗೇರ, ಮಹಾಬಲ ಮಡಿವಾಳ ಅವರೂ ಅನಧಿಕೃತವಾಗಿ ಅನುಮತಿ ನೀಡಿದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಬಾರ್‌ಗೆ ಪಕ್ಕದಲ್ಲೇ ಇರುವ ಕೋಟ ವಿವೇಕ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಜಗದೀಶ ನಾವುಡ ಮಾತನಾಡಿ, ಸಂಸ್ಥೆಯ 1200 ವಿದ್ಯಾರ್ಥಿಗಳ ಹದಿಹರೆಯ ದವರಾಗಿದ್ದು ಬಾರ್ ತೆರೆದಿರುವುದು ವಿದ್ಯಾರ್ಥಿಗಳ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಕಾನೂನುಗಳನ್ನು ಬದಿಗಿರಿಸಿ ಹೃದಯದ ತೀರ್ಮಾನ ತೆಗೆದುಕೊಳ್ಳಿ ಎಂದರು.

ಬಾರ್‌ಗೆ ಪಕ್ಕದಲ್ಲೇ ಇರುವ ಕೋಟ ವಿವೇಕ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಜಗದೀಶ ನಾವುಡ ಮಾತನಾಡಿ, ಸಂಸ್ಥೆಯ 1200 ವಿದ್ಯಾರ್ಥಿಗಳ ಹದಿಹರೆಯ ದವರಾಗಿದ್ದು ಬಾರ್ ತೆರೆದಿರುವುದು ವಿದ್ಯಾರ್ಥಿಗಳ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಕಾನೂನುಗಳನ್ನು ಬದಿಗಿರಿಸಿ ಹೃದಯದ ತೀರ್ಮಾನ ತೆಗೆದುಕೊಳ್ಳಿ ಎಂದರು.

ಪಟ್ಟಣ ಪಂಚಾಯತ್ ನೀಡಿದ ಎನ್‌ಒಸಿಯಲ್ಲಿ ಮುಖ್ಯಾಧಿಕಾರಿ ಮತ್ತು ಅಧ್ಯಕ್ಷರ ಸಹಿ ಇರುವುದರಿಂದ ಇಬ್ಬರೂ ತಪ್ಪಿತಸ್ಥರು ಎಂದು ವಸುಮತಿ ನಾಯಿರಿ ಸಭೆಗೆ ತಿಳಿಸಿದರು. ಆಗ ಅಧ್ಯಕ್ಷೆ ರತ್ನಾ ಗಾಣಿಗ ಮಾತನಾಡಿ ನಾನು ನೋಡದೆ ಸಹಿ ಹಾಕಿದ್ದೇನೆ ಎಂದು ತಪ್ಪೋಪ್ಪಿಕೊಂಡರು. ಇದು ಸದಸ್ಯರ ನಡುವೆ ಇನ್ನಷ್ಟು ವಾದ-ಪ್ರತಿವಾದಕ್ಕೆ ಕಾರಣವಾಯಿತು. ಪ್ರತಿಪಕ್ಷ ನಾಯಕ ಶ್ರೀನಿವಾಸ ಅಮೀನ್ ಮುಖ್ಯಾಧಿಕಾರಿಗಳ ವಿರುದ್ಧ ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿ ಅವರಲ್ಲಿ ಮುಖ್ಯಾಧಿಕಾರಿಗಳನ್ನು ಅಮಾನತು ಮಾಡುವಂತೆ ಕೋರುವ ಕುರಿತು ಸಭೆಗೆ ತಿಳಿಸಿದರು.

ಸಭೆಯ ಕೊನೆಯಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ಈಗಾಗಲೇ ನೀಡಿರುವ ಬಾರ್ ಎನ್‌ಒಸಿ ರದ್ದು ಮಾಡುವುದು ಹಾಗೂಮುಂದೆ ಯಾವುದೇ ಪರವಾನಿಗೆ ಇದ್ದರೂ ಅದನ್ನು ಸಭೆಯಲ್ಲಿಟ್ಟು ತೀರ್ಮಾನ ತೆಗೆದುಕೊಳ್ಳುವ ಕುರಿತು ನಿರ್ಣಯ ಕೈಗೊಳ್ಳಲಾಯಿತು. ಸಭೆಯಲ್ಲಿ ಉಪಾಧ್ಯಕ್ಷ ಉದಯ ಪೂಜಾರಿ, ಅಬಕಾರಿ ಅಧಿಕಾರಿಗಳು, ಸರ್ವಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News