×
Ad

ಡಿ. 24: ಕಡಬದಲ್ಲಿ 'ಯೋಗಕ್ಷೇಮ' ಸಹಕಾರ ಸೌಧದ ಉದ್ಘಾಟನೆ

Update: 2017-12-23 22:28 IST

ಕಡಬ, ಡಿ.23. ಸುಮಾರು ಎರಡು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡ 'ಯೋಗಕ್ಷೇಮ' ಸಹಕಾರ ಸೌಧದ ಉದ್ಘಾಟನಾ ಸಮಾರಂಭವು  ಡಿ.24 ರಂದು ನಡೆಯಲಿದೆ.

ನೂತನ ಕಟ್ಟಡವನ್ನು ಜಿಲ್ಲಾ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಡಾ. ಎಂ.ಎನ್.ರಾಜೇಂದ್ರಕುಮಾರ್ ಉದ್ಘಾಟಿಸಲಿದ್ದು, ಸುಳ್ಯ ಶಾಸಕ ಎಸ್.ಅಂಗಾರ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಭದ್ರತಾ ಕೊಠಡಿಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಲಿದ್ದಾರೆ. ಆಡಳಿತ ಸಭಾ ಭವನವನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಉದ್ಘಾಟಿಸಲಿದ್ದಾರೆ. ಗೋದಾಮು ಕಟ್ಟಡವನ್ನು ನಬಾರ್ಡ್ ಸಂಸ್ಥೆಯ ಮಂಗಳೂರು ವಿಭಾಗದ ಎ.ಜಿ.ಎಂ ಹರೀಶ್ ಕುಮಾರ್ ಉದ್ಘಾಟಿಸಲಿದ್ದಾರೆ. ಲಾಕರ್ ನ ಪ್ರಥಮ ಕೀ ಹಸ್ತಾಂತರವನ್ನು ಜಿಲ್ಲಾ ಪಂ. ಸದಸ್ಯ ಪಿ.ಪಿ. ವರ್ಗೀಸ್ ನೆರವೇರಿಸಲಿದ್ದಾರೆ.

ಸಹಕಾರ ಭಾರತಿಯ ರಾಜ್ಯ ಸಂಘಟನಾ ಪ್ರಮುಖ್, ದ.ಕ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಹರೀಶ್ ಆಚಾರ್, ಪುತ್ತೂರು ತಾಲೂಕು ಪಂ. ಅಧ್ಯಕ್ಷೆ ಭವಾನಿ ಚಿದಾನಂದ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಶಶಿಕುಮಾರ್ ಬಾಲ್ಯೊಟ್ಟು, ಪುತ್ತೂರು ಪಿ.ಎಲ್.ಡಿ ಬ್ಯಾಂಕಿನ ಅಧ್ಯಕ್ಷ ಎ.ಬಿ.ಮನೋಹರ ರೈ, ಸಹಕಾರಿ ಸಂಘಗಳ ದ.ಕ ಜಿಲ್ಲಾ ಉಪನಿಬಂಧಕ ಬಿ.ಕೆ.ಸಲೀಂ, ಪುತ್ತೂರು ಸಹಾಯಕ ನಿಬಂಧಕ ಗೋಪಾಲಯ್ಯ ಎನ್.ಕೆ, ಕಡಬ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಬು ಮುಗೇರ ತುಂಬೆತಡ್ಕ ಮೊದಲಾದವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ನೂತನ ಕಟ್ಟಡದಲ್ಲಿ ಹವಾನಿಯಂತ್ರಿತ ಆಡಳಿತ ಕಛೇರಿ, ಅತಿಥಿಗೃಹ, ಸಭಾ ಕೊಠಡಿ, ಸೇಫ್ ಲಾಕರ್ ವ್ಯವಸ್ಥೆ, 6000 ಚದರ ಅಡಿ ವಿಸ್ತೀರ್ಣದ ಗೋದಾಮು ಸೇರಿದಂತೆ ಸುಸಜ್ಜಿತ ವ್ಯವಸ್ಥೆಗಳಿವೆ. ವಿದ್ಯುತ್ ಉಳಿತಾಯದ ದೃಷ್ಟಿಯಿಂದ ಬ್ಯಾಂಕಿನ ಸದಸ್ಯರು ತಮ್ಮ ಲಾಭಾಂಶದಲ್ಲಿ ಶೇ 3 ರಷ್ಟು ನೀಡಿದ ಹಣದಲ್ಲಿ ಸೌರ ವಿದ್ಯುತ್ ವ್ಯವಸ್ಥೆ ಕಲ್ಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News