ಕೊಳಲಗಿರಿಯ ರಿಕ್ಷಾ ಚಾಲಕ ನಾಪತ್ತೆ
Update: 2017-12-23 23:01 IST
ಬ್ರಹ್ಮಾವರ, ಡಿ.23: ಉಪ್ಪೂರು ಗ್ರಾಮದ ಕೊಳಲಗಿರಿ ಲಕ್ಷ್ಮೀನಗರ ನಿವಾಸಿ, ರಿಕ್ಷಾ ಚಾಲಕ ಕೃಷ್ಣ (36) ಎಂಬವರು ಡಿ.15ರಿಂದ ನಾಪತ್ತೆಯಾಗಿದ್ದಾರೆ.
ಬೆಳಗ್ಗೆ ತನ್ನ ಬಾಡಿಗೆ ರಿಕ್ಷಾವನ್ನು ಮನೆಯಿಂದ ತೆಗೆದುಕೊಂಡು ಉಡುಪಿಗೆ ಹೋಗಿದ್ದು, ರಾತ್ರಿ 8:15ರ ಸುಮಾರಿಗೆ ಪತ್ನಿಗೆ ಕರೆ ಮಾಡಿದ ಕೃಷ್ಣ, ಮೆಹಂದಿ ಕಾರ್ಯಕ್ರಮಕ್ಕೆ ಹೋಗುತ್ತಿದ್ದು, ರಾತ್ರಿ ಮನೆಗೆ ಬರುವುದಿಲ್ಲ ಎಂದು ತಿಳಿಸಿದ್ದರು. ಮರುದಿನ ಬೆಳಗ್ಗೆ 10ಗಂಟೆಯವರೆಗೂ ಮನೆಗೆ ಬರದಿದ್ದ ಕೃಷ್ಣರಿಗೆ ಅವರ ಪತ್ನಿ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬಳಿಕ ಹುಡುಕಾಡಿದರೂ ಈವರೆಗೂ ಅವರ ಪತ್ತೆಯಾಗಿಲ್ಲ. ಈ ಮಧ್ಯೆ ಡಿ. 22ರಂದು ಅವರ ರಿಕ್ಷಾ ಉಡುಪಿಯ ಹನುಮಂತ ನಗರದ ಬಳಿ ಪತ್ತೆಯಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.