ಜೂಜಾಟ: ಮೂವರ ಬಂಧನ
Update: 2017-12-23 23:03 IST
ಉಡುಪಿ, ಡಿ.23: ಅಂಪಾರು ಗ್ರಾಮದ ಗುಡಿಬೆಟ್ಟು ಎಂಬಲ್ಲಿನ ಹಾಡಿಯಲ್ಲಿ ಡಿ.22ರಂದು ಸಂಜೆ ಜೂಜಾಟ ಆಡುತ್ತಿದ್ದ ಮೂವರನ್ನು ಉಡುಪಿ ಸೆನ್ ಅಪರಾಧ ಪೊಲೀಸರು ಬಂಧಿಸಿದ್ದಾರೆ.
ಕಾವ್ರಾಡಿ ಬಲಾಡಿಯ ನಾಗೇಶ್ ಮೊಗವೀರ(40), ಕಕ್ಕುಂಜೆಯ ಅಣ್ಣಯ್ಯ ದೇವಾಡಿಗ (57), ಗುಲ್ವಾಡಿಯ ತ್ಯಾಗರಾಜ್ ಶೆಟ್ಟಿ(43) ಬಂಧಿತ ಆರೋಪಿ ಗಳು.
ಇವರಿಂದ 6,500 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.