ಅಫ್ಘಾನ್ ನಲ್ಲಿ ಬಾಂಬ್ ಸ್ಫೋಟ: 7 ನಾಗರಿಕರು ಮೃತ್ಯು

Update: 2017-12-24 17:16 GMT

ಕಾಬೂಲ್,ಡಿ.24: ಅಫ್ಘಾನಿಸ್ತಾನದ ದಕ್ಷಿಣ ಹೆಲ್ಮಂಡ್ ಪ್ರಾಂತದಲ್ಲಿ ರವಿವಾರ ರಸ್ತೆಬದಿ ಬಾಂಬೊಂದು ಸ್ಫೋಟಗೊಂಡು, ಕನಿಷ್ಠ ಏಳು ಮಂದಿ ನಾಗರಿಕರು ಮೃತಪಟ್ಟಿದ್ದಾರೆ. ಈ ದಾಳಿಯ ಹೊಣೆಯನ್ನು ಯಾವುದೇ ಉಗ್ರವಾದಿ ಸಂಘಟನೆ ವಹಿಸಿಕೊಂಡಿಲ್ಲ. ಈ ಮಧ್ಯೆ, ಅಫ್ಘಾನಿಸ್ತಾನದ ಪೂರ್ವ ಲೊಗಾರ್ ಪ್ರಾಂತದ ಮಾರುಕಟ್ಟೆ ಪ್ರದೇಶದಲ್ಲಿ ಅಫ್ಘಾನಿಸ್ತಾನದ ಭದ್ರತಾ ಪಡೆಗಳು ಹಾಗೂ ತಾಲಿಬಾನ್ ಬಂಡುಕೋರರ ನಡುವೆ ನಡೆದ ಘರ್ಷಣೆಯ ವೇಳೆ ನಡೆದ ಮೋರ್ಟಾರ್ ದಾಳಿಯಲ್ಲಿ ಮೂವರು ನಾಗರಿಕರು ಮೃತಪಟ್ಟಿದ್ದಾರೆ ಹಾಗೂ ಇತರ ಏಳು ಮಂದಿ ಗಾಯಗೊಂಡಿದ್ದಾರೆಂದು ಪ್ರಾಂತದ ಗವರ್ನರ್ ಸಲೀಂ ಸಾಲೆಹ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News