×
Ad

ಮಂಗಳೂರು: ‘ರಿಫಾ’ ಬುರ್ಖಾ ಹೌಸ್ ಶುಭಾರಂಭ

Update: 2017-12-25 16:56 IST

ಮಂಗಳೂರು, ಡಿ.25: ನಗರದ ಕಂಕನಾಡಿಯ ಕುನಿಲ್ ಕಾಂಪ್ಲೆಕ್ಸ್‌ನಲ್ಲಿ ನವೀಕೃತ ‘ರಿಫಾ’ ಬುರ್ಖಾ ಹೌಸ್ ಸೋಮವಾರ ಶುಭಾರಂಭಗೊಂಡಿತು.

ರಿಫಾ ಕುಟುಂಬದ ಹಿರಿಯ ಸದಸ್ಯೆ ಝೈನಬಾ ‘ರಿಫಾ’ ಬುರ್ಖಾ ಹೌಸ್ ಅನ್ನು ಉದ್ಘಾಟಿಸಿದರು.

ಈ ಸಂದರ್ಭ ‘ರಿಫಾ’ ಬುರ್ಖಾ ಹೌಸ್‌ನ ಪಾಲುದಾರರಾದ ಎ.ಪಿ. ಅಬೂಬಕರ್ ಸಿದ್ದೀಕ್, ಶೇಖ್ ಶರೀಫ್ ಹಾಗೂ ರಿಫಾ ಕುಟುಂಬದ ಇತರ ಸದಸ್ಯರು ಉಪಸ್ಥಿತರಿದ್ದರು.

ಕಳೆದ 10 ವರ್ಷದಿಂದ ‘ರಿಫಾ’ ಬುರ್ಖಾ ಹೌಸ್ ಬುರ್ಖಾ ಮಾರಾಟದಲ್ಲಿ ಹೆಗ್ಗಳಿಕೆ ಪಡೆದಿದ್ದು, ಶುಭಾರಂಭದ ಪ್ರಯುಕ್ತ ಏರ್ಪಡಿಸಲಾದ ವಿಶೇಷ ರಿಯಾಯಿತಿಯ ಪ್ರಯೋಜನವನ್ನು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಪಡೆದರು.

ನೂತನ ಶೋರೂಂನಲ್ಲಿ ವಿವಿಧ ರೀತಿಯ, ಹೊಸ ವಿನ್ಯಾಸದ ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತಹ ಸಂಗ್ರಹವಿದೆ. ವಿದೇಶಿ ಬುರ್ಖಾಗಳಲ್ಲದೆ ಬುರ್ಖಾಕ್ಕೆ ಸಂಬಂಧಿಸಿ ಸಾಮಗ್ರಿಗಳು ಕೂಡ ಇಲ್ಲಿ ಲಭ್ಯವಿದೆ. ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಬುರ್ಖಾವನ್ನು ಆಕರ್ಷಕ ಶೈಲಿಯಲ್ಲಿ ಹೊಲಿದು ಕೊಡುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News