ಭಟ್ಕಳ: ಜಿ.ಎಸ್.ಬಿ ಸಮಾಜ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ
ಭಟ್ಕಳ,ಡಿ.25: ಗೌಡ ಸಾರಸ್ವತ ಸಮಾಜ ಕಲ್ಯಾಣ ಸೇವಾ ಸಮಿತಿಯ ವಾರ್ಷಿಕ ಕ್ರೀಡಾಕೂಟದ ಪ್ರಯುಕ್ತ ವಡೇರ ಮಠ ಮೈದಾನದಲ್ಲಿ ಭಟ್ಕಳ ತಾಲೂಕು ಸ್ವಸಮಾಜ ಬಾಂಧವರಿಗೆ ಕಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಲಾಯಿತು.
ಹಾಂಗ್ಯೋ ಮ್ಯಾಟ್ ಕಬಡ್ಡಿಯನ್ನು ಉಡುಪಿ ಜಿಲ್ಲಾ ಜಿ.ಎಸ್.ಬಿ ಹಿತರಕ್ಷಣಾ ವೇದಿಕೆಯ ಸಂಚಾಲಕರಾದ ವಿವೇಕಾನಂದ ಶೆಣೈರವರು ಪಂದ್ಯಾವಳಿಯನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾದ ಶ್ರೀ ಮಾರುತಿ ಸಹಕಾರಿ ಪತ್ತಿನ ಸಂಘದ ಅಧ್ಯಕ್ಷರಾದ ಅಶೋಕ ಪೈ ಸಮಾಜ ಬಾಂಧವರು ಶಿಕ್ಷಣ, ವ್ಯವಹಾರದಂತೆ ಕ್ರೀಡಾ ಕ್ಷೇತ್ರದಲ್ಲೂ ಸಾಧನೆಗಯ್ಯುವಂತೆ ಕರೆನೀಡಿದರು. ಜಿ.ಎಸ್.ಬಿ ಈಗಲ್ಸ, ನಂದಿನಿ ಕ್ನೈಟ್ ರೈಡೆರ್ಸ್, ರಘುನಾಥ ವಾರಿಯರ್ಸ್, ಭಟ್ಕಳ ಬುಲ್ಸ್ ಈ 4 ತಂಡಗಳ ನಡುವೆ ಜರುಗಿದ ಪಂದ್ಯಾವಳಿಯಲ್ಲಿ ಭಟ್ಕಳ ಬುಲ್ಸ್ ತಂಡವು ಜಯಶಾಲಿಯಾಯಿತು. ನಕುಲ ಕಾಮತ ಬೆಸ್ಟ ರೈಡರ, ನಕುಲ ಶಾನಭಾಗ ಪ್ಲೇಯರ ಆಫ ದ ಮ್ಯಾಚ, ನಿತ್ಯಾನಂದ ಪ್ರಭು ಬೆಸ್ಟ ಡಿಫೆಂಡರ ಪ್ರಶಸ್ತಿಯನ್ನು ಪಡೆದರು. ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಖ್ಯಾತ ಉದ್ಯಮಿ ನಾರಾಯಣ ಶಾನಭಾಗ, ಉದ್ಯಮಿ ಶ್ರೀಧರ ಶಾನಭಾಗ, ಸಮಾಜ ಸೇವಕರಾದ ಉದಯ ಆರ್ ಪೈ, ವಿಠೋಬ ಪ್ರಭು, ಗಣಪತಿ ಪ್ರಭು, ವಿನೋದ ಪ್ರಭು, ಹರಿಶ್ಚಂದ್ರ ಕಾಮತ, ಸುಬ್ರಾಯ ಕಾಮತ, ನೀತಾ ಕಾಮತ, ಅಧ್ಯಕ್ಷ ಕಿರಣ ಶಾನಭಾಗ ಮುಂತಾದವರು ಉಪಸ್ಥಿತರಿದ್ದರು. ಶ್ರೀನಾಥ ಪೈ ಹಾಗೂ ವಿಘ್ನೇಶ ಪ್ರಭು ನಿರೂಪಿಸಿದರು, ಚಂದ್ರಕಾಂತ ಕಾಮತ ವಂದಿಸಿದರು.