ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಕ್ಯಾಂಪಸ್ ಪ್ರತಿಭೋತ್ಸವ
ಉಳ್ಳಾಲ,ಡಿ.25 ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಕ್ಯಾಂಪಸ್ ಪ್ರತಿಭೋತ್ಸವ ಕಾರ್ಯಕ್ರಮ ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧ್ಯಕ್ಷ ಮುನಿರ್ ಅಹ್ಮದ್ ಕಾಮಿಲ್ ಸಖಾಫಿ ಉಸ್ತಾದರ ಅಧ್ಯಕ್ಷತೆಯಲ್ಲಿ ಅಲ್-ಮದೀನಾ ವಿದ್ಯಾ ಸಂಸ್ಥೆ ಮಂಜನಾಡಿಯಲ್ಲಿ ನಡೆಯಿತು. ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸದಸ್ಯ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಎಸ್ಸೆಸ್ಸೆಫ್ ದ.ಕ ಜಿಲ್ಲಾ ಸದಸ್ಯ ಜಮಾಲುದ್ದೀನ್ ಸಖಾಫಿ ಮುದುಂಗಾರುಕಟ್ಟೆ,ಡಿವಿಶನ್ ಕಾರ್ಯದರ್ಶಿ ಸಯ್ಯದ್ ಖುಬೈಬ್ ತಂಙಳ್ ಉಳ್ಳಾಲ, ರಝಾಕ್ ಸರ್ ಅಲ್-ಮದೀನಾ,ಇಬ್ರಾಹಿಂ ಸರ್ ತಲಪಾಡಿ,ತೌಸೀಫ್ ಸ ಅದಿ ಎಚ್.ಎಚ್. ಸ್ಕೂಲ್ ಕುತ್ತಾರು, ಉಳ್ಳಾಲ ಡಿವಿಷನ್ ಉಸ್ತುವಾರಿ ಸಲೀಂ ಹಾಜಿ ಬೈರಿಕಟ್ಟೆ ,ಡಿವಿಜನ್ ಪ್ರಧಾನ ಕಾರ್ಯದರ್ಶಿ ಶರೀಫ್ ಮುಡಿಪು, ಕೋಶಾಧಿಕಾರಿ ಹಮೀದ್ ತಲಪಾಡಿ ,ಉಳ್ಳಾಲ ಡಿವಿಜನ್ ಪ್ರತಿಭೋತ್ಸವ ಸಮಿತಿ ಚೇರ್ ಮ್ಯಾನ್ ಫಾರೂಖ್ ಸಖಾಫಿ ಮದನಿ ನಗರ, ಕನ್ವೀನರ್ ತೌಸಿಫ್ ಸ ಅದಿ ಹರೇಕಳ, ಕೆ.ಸಿ.ಎಫ್ ನಾಯಕ ಅಕ್ಬರ್ ಅಲಿ, ಎಸ್.ವೈ.ಎಸ್ ನಾಯಕ ಮಜೀದ್ ಫರೀದ್ ನಗರ, ಡಿವಿಷನ್ ನಾಯಕರಾದ ಸಮೀರ್ ತೊಕ್ಕೊಟ್ಟು, ಹಮೀದ್ ನಾಟೆಕಲ್, ಅಝೀಝ್ ಎಚ್.ಕಲ್, ಜಾಫರ್ ಅಳೇಕಲ, ಅಬುಸಾಲಿಹ್ ಹರೇಕಳ, ಇಲ್ಯಾಸ್ ಪೊಟ್ಟೊಳಿಕೆ, ಶಂಶುದ್ದೀನ್ ಮೊಂಟೆಪದವು ಉಪಸ್ಥಿತರಿದ್ದರು.