×
Ad

ಎನ್‌ಎಸ್‌ಯುಐನಿಂದ ವೃದ್ಧಾಶ್ರಮದಲ್ಲಿ ಕ್ರಿಸ್ಮಸ್ ಆಚರಣೆ

Update: 2017-12-25 20:06 IST

ಉಡುಪಿ, ಡಿ.25: ಎನ್‌ಎಸ್‌ಯುಐ ಉಡುಪಿ ಜಿಲ್ಲಾ ಘಟಕದ ವತಿಯಿಂದ ಅಶಕ್ತರು ಹಾಗೂ ಹಿರಿಯರೊಂದಿಗೆ ಕ್ರಿಸ್ಮಸ್ ಆಚರಣೆ ಕಾರ್ಯಕ್ರಮ ರವಿವಾರ ನಡೆಯಿತು.

ಬ್ರಹ್ಮಾವರದಲ್ಲಿರುವ ಸ್ನೇಹಾಲಯ ವೃದ್ಧಾಶ್ರಮಕ್ಕೆ ತೆರಳಿದ ಎನ್‌ಎಸ್‌ಯುಐ ಘಟಕದ ಸದಸ್ಯರು ಅಲ್ಲಿನ ವೃದ್ಧರೊಂದಿಗೆ ಕ್ರಿಸ್ಮಸ್ ಕ್ಯಾರಲ್ಸ್ ಹಾಡಿ ರಂಜಿಸಿದರು.

ಈ ವೇಳೆ ಕ್ರಿಸ್ಮಸ್ ಶುಭಾಶಯ ಹಂಚಿಕೊಂಡು ಮಾತನಾಡಿದ ಜಿಲ್ಲಾಧ್ಯಕ್ಷ ಕ್ರಿಸ್ಟನ್ ಡಿಆಲ್ಮೇಡಾ, ಕ್ರಿಸ್ಮಸ್ ಎಂಬುದು ಶಾಂತಿ-ಸೌಹಾರ್ದದ ಹಬ್ಬವಾಗಿದ್ದು, ಪರಸ್ಪರ ಹಂಚಿಕೊಂಡು ತಿನ್ನುವುದನ್ನು ಸೂಚಿಸುತ್ತದೆ. ಸಮಾಜದಲ್ಲಿ ದುಃಖದಲ್ಲಿ ಇರುವವರೊಂದಿಗೆ, ಕುಟುಂಬದ ಪ್ರೀತಿಯಿಂದ ವಂಚಿತರಾದವರೊಂದಿಗೆ ನಮ್ಮ ಸಂತೋಷವನ್ನು ಹಂಚಿಕೊಂಡಾಗ ಅದಕ್ಕಿಂತ ಮಿಗಿಲಾದ ಕ್ರಿಸ್ಮಸ್ ಆಚರಣೆ ಮತ್ತೊಂದಿಲ್ಲ ಎಂದರು.

ಬಳಿಕ ವೃದ್ಧಾಶ್ರಮದ ನಿವಾಸಿಗಳೊಂದಿಗೆ ಎನ್‌ಎಸ್‌ಯುಐ ಉಡುಪಿ ಜಿಲ್ಲಾ ಘಟಕದ ಎಲ್ಲಾ ಸದಸ್ಯರು ಜೊತೆಗೂಡಿ ಕ್ರಿಸ್ಮಸ್ ಸಹಭೋಜನ ಮಾಡಿ ಕ್ರಿಸ್ಮಸ್ ಸಂತೋಷವನ್ನು ಹಂಚಿಕೊಂಡರು.

ಈ ವೇಳೆ ಸದಸ್ಯರಾದ ಮಾರ್ಸ್, ಪ್ರಜ್ವಲ್, ಜೊವಿಟಾ, ಲೋಯ್ಡ, ಟೋನಿ, ದೇವದಾಸ್ ಹಾಗೂ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News