×
Ad

ಮರ್ಕಝ್ ಸಂದೇಶ ಯಾತ್ರೆಗೆ ಕುಂದಾಪುರದಲ್ಲಿ ಸಂಭ್ರಮದ ಚಾಲನೆ

Update: 2017-12-25 21:33 IST

ಕುಂದಾಪುರ, ಡಿ. 24: ವಿಶ್ವ ವಿಖ್ಯಾತ ವಿದ್ಯಾ ಕೇಂದ್ರ ಕಲ್ಲಿಕೋಟೆ ಮರ್ಕಝ್ ಸಖಾಫತಿಸ್ಸುನ್ನಿಯ್ಯಃ 40ನೆ ವಾರ್ಷಿಕ- ರೂಬಿ ಜುಬಿಲಿ- ಪ್ರಚಾರಾರ್ಥ ಕುಂದಾಪುರ ದಿಂದ ಕೊಡಗಿನ ಕೊಟ್ಟಮುಡಿಯ ತನಕ ಹಮ್ಮಿಕೊಂಡ ಮೂರು ದಿನಗಳ ಶೈಕ್ಷಣಿಕ ಜಾಗೃತಿ ಜಾಥಾಕ್ಕೆ ಕುಂದಾಪುರ ಸೈಯದ್ ಯೂಸುಫ್ ಅಲ್ ಖಾದಿರಿ ಅವರ ಮಖಾಂ ಝಿಯಾರತ್‌ನೊಂದಿಗೆ ಚಾಲನೆ ದೊರೆಯಿತು,

ಬಳಿಕ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮರ್ಕಝ್ ಸ್ವಾಗತ ಸಮಿತಿ ಕರ್ನಾಟಕ ರಾಜ್ಯಾಧ್ಯಕ್ಷ ತೌಫೀಖ್ ಅಬ್ದುಲ್ಲಾ ಹಾಜಿಯವರ ಅಧ್ಯಕ್ಷ ತೆಯಲ್ಲಿ ಎಸ್‌ವೈಎಸ್ ಉಡುಪಿ ಜಿಲ್ಲಾಧ್ಯಕ್ಷ ಸಯ್ಯಿದ್ ಜಅಫರ್ ಅಸ್ಸಖಾಫ್ ತಂಙಳ್ ಉದ್ಘಾಟಿಸಿದರು.

ಎಸ್‌ವೈಎಸ್ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಎಮ್ಮೆಸ್ಸೆಂ ಝೈನಿ ಕಾಮಿಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಾಥಾ ನಾಯಕ ಮರ್ಕಝ್ ಡೈರೆಕ್ಟರ್ ಡಾ.ಅಬ್ದುಲ್ ಹಕೀಂ ಅಝ್ಹರಿ ಅವರಿಗೆ ಮರ್ಕಝ್ ನ ಪತಾಕೆ ನೀಡುವ ಮೂಲಕ ಯಾತ್ರೆಗೆ ಚಾಲನೆ ನೀಡಲಾಯಿತು. ಅನಂತರ ಉಡುಪಿ, ಕನ್ನಂಗಾರ್ ಹಾಗೂ ಗುರುಪುರ ಕೈಕಂಬಗಳ ಸ್ವಾಗತ ಸಮಾರಂಭಗಳ ಬಳಿಕ ಕೃಷ್ಣಾಪುರ ಶಾಲಾ ಮೈದಾನದಲ್ಲಿ ಸಮಾರೋಪಗೊಂಡಿತು.

ವಿವಿಧ ಕೇಂದ್ರದಲ್ಲಿ ಮುಸ್ಲಿಂ ಜಮಾಅತ್ ಕೌನ್ಸಿಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬುಸುಫ್ಯಾನ್ ಮದನಿ , ಜಂಇಯ್ಯತುಲ್ ಉಲಮಾ ರಾಜ್ಯ ಕಾರ್ಯದರ್ಶಿ ತೋಕೆ ಕಾಮಿಲ್ ಸಖಾಫಿ , ಜಾಥಾ ಸಮಿತಿಯ ಅಧ್ಯಕ್ಷ ಡಿ.ಕೆ.ಉಮರ್ ಸಖಾಫಿ, ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಎಸ್.ಪಿ.ಹಂಝ ಸಖಾಫಿ, ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲಿ ಸಖಾಫಿ ಅಶ್ ಅರಿಯ್ಯಃ ಮಲ್ಲೂರ್ ಅಸಾಸ್ ಸಂಸ್ಥೆಯ ಅಧ್ಯಕ್ಷ ಅಶ್ರಫ್ ಸಅದಿ, ಕೋಡಿ ಮುದರ್ರಿಸ್ ಎಚ್.ಐ. ಯೂಸುಫ್ ಸಖಾಫಿ, ಎಸ್‌ಇಡಿಸಿ ರಾಜ್ಯಾಧ್ಯಕ್ಷ ಕೆ.ಕೆ.ಎಂ. ಕಾಮಿಲ್ ಸಖಾಫಿ, ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಹಾಫಿಲ್ ಸುಫ್ಯಾನ್ ಸಖಾಫಿ ಇಕ್ರಾಮುಲ್ಲಾ ಸಖಾಫಿ ನಾವುಂದ ಮುಂತಾದವರು ಮಾತನಾಡಿದರು. ಖತರ್ ಕೆಸಿಎಫ್ ನಾಯಕರಾದ ಇಖ್ಬಾಲ್ ನಾವುಂದ ,ಅಬ್ದುಲ್ ಸತ್ತಾರ್ ನಾವುಂದ ಉಪಸ್ಥಿತರಿದ್ದರು.

ಕೃಷ್ಣಾಪುರದಲ್ಲಿ ನಡೆದ ಮೊದಲ ದಿನದ ಸಮಾರೋಪ ಕಾರ್ಯಕ್ರಮದಲ್ಲಿ ಹಾಜಿ ಮುಮ್ತಾಝ್ ಅಲಿ ಅಧ್ಯಕ್ಷ ತೆ ವಹಿಸಿದ್ದರು. ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ, ಶಾಫಿ ಸಅದಿ ಬೆಂಗಳೂರು ಮುಂತಾದವರು ಮಾತನಾಡಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News