×
Ad

ಕಂಕನಾಡಿ ಶ್ರೀಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ ಉತ್ತರ ದಿಕ್ಕಿನ ಪೌಳಿಯ ಉದ್ಘಾಟನೆ

Update: 2017-12-25 22:02 IST

ಮಂಗಳೂರು, ಡಿ. 25: ಇತಿಹಾಸ ಪ್ರಸಿದ್ಧ ಕಂಕನಾಡಿ ಶ್ರೀಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ ಉತ್ತರ ದಿಕ್ಕಿನ ಪೌಳಿಯ ಉದ್ಘಾಟನೆ ಮತ್ತು ಬ್ರಹ್ಮಕಲಶ ಪ್ರಯುಕ್ತ ಸೋಮವಾರ ಹೊರೆಕಾಣಿ ಮೆರವಣಿಗೆ ನಡೆಯಿತು.

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರು ದೀಪ ಬೆಳಗಿ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆ ಕ್ಷೇತ್ರದಿಂದ ಹೊರಟು ಮಣ್ಣಗುಡ್ಡೆ, ಲೇಡಿಹಿಲ್, ಬಳ್ಳಾಲ್‌ಭಾಗ್, ಕೊಡಿಯಾಲ್‌ಬೈಲ್, ಬಂಟ್ಸ್‌ಹಾಸ್ಟೆಲ್, ಅಂಬೇಡ್ಕರ್ ವೃತ್ತ, ಬಲ್ಮಠ, ಬೆಂದೂರ್‌ವೆಲ್, ಕಂಕನಾಡಿ ಹಾಗೂ ಕಂಕನಾಡಿ ಬೈಪಾಸ್ ಮೂಲಕ ಶ್ರೀ ಕ್ಷೇತ್ರಕ್ಕೆ ತಲುಪಿತು.

ಶಾಸಕ ಜೆ.ಆರ್.ಲೋಬೊ, ಕಂಕನಾಡಿ ಗರಡಿ ಕ್ಷೇತ್ರದ ಅಧ್ಯಕ್ಷ ಕೆ.ಚಿತ್ತರಂಜನ್, ಕುದ್ರೋಳಿ ಕ್ಷೇತ್ರದ ಅಧ್ಯಕ್ಷ ಎಚ್.ಸಾಯಿರಾಮ್, ಖಜಾಂಚಿ ಪದ್ಮರಾಜ್ ಆರ್., ಉದ್ಯಮಿ ಡಾ.ರಾಜಶೇಖರ ಕೋಟ್ಯಾನ್, ಗರಡಿಯ ಮೊಕ್ತೇಸರರಾದ ಬಿ.ವಿಠಲ, ಸುರೇಂದ್ರನಾಥ್, ಕಂಕನಾಡಿ ಗರೋಡಿ ಬಿಲ್ಲವ ಸೇವಾ ಸಮಾಜದ ಅಧ್ಯಕ್ಷ ಧರ್ಮಪಾಲ್, ಎ.ವಾಮನ, ಬಿ.ದಾಮೋದರ ನಿಸರ್ಗ, ಜೆ.ಕೇಶವ, ದಿವರಾಜ್, ಜಗದೀಪ್ ಡಿ.ಸುವರ್ಣ, ಜೆ.ಕಿಶೋರ್‌ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಡಿ.26ರಂದು ಸಂಜೆ 6 ಗಂಟೆಗೆಉತ್ತರ ದಿಕ್ಕಿನ ಪೌಳಿಯ ಉದ್ಘಾಟನೆ ಮತ್ತು ಧಾರ್ಮಿಕ ಸಭೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News