ವಿಶೇಷ ಒಲಿಂಪಿಕ್ಸ್ ಪದಕ ವಿಜೇತ ಈಗ ಕೂಲಿ

Update: 2017-12-26 04:12 GMT

ಚಂಡೀಗಢ, ಡಿ.26: ಹದಿನೇಳು ವರ್ಷದ ರಾಜಬೀರ್‌ಸಿಂಗ್ 2015ರ ಲಾಸ್‌ ಏಂಜಲೀಸ್ ವಿಶೇಷ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಬಂದಾಗ ಭರ್ಜರಿ ಸ್ವಾಗತ ದೊರಕಿತ್ತು. ಆದರೆ ಈ ಕೀರ್ತಿ ಅಲ್ಪಕಾಲಕ್ಕೇ ಸೀಮಿತವಾಗಿದ್ದು, ಜೀವನ ನಿರ್ವಹಣೆಗೆ ಈತ ಹೆಣಗಾಡುತ್ತಿರುವ ಸ್ಥಿತಿ ಇದೆ.

ಕಡಿಮೆ ಬೌದ್ಧಿಕ ಮಟ್ಟ ವಿಭಾಗದಲ್ಲಿ ಸ್ಪರ್ಧಿಸಿದ್ದ ಸಿಂಗ್ 1 ಕಿಲೋಮಿಟರ್ ಹಾಗೂ 2 ಕಿಲೋಮೀಟರ್ ಸೈಕ್ಲಿಂಗ್‌ನಲ್ಲಿ ದೇಶಕ್ಕೆ ಹೆಮ್ಮೆ ತಂದಿದ್ದರು. ಇದೀಗ ತಂದೆಯ ಜತೆ ಕೂಲಿ ಕೆಲಸ ಮಾಡಿ ಕುಟುಂಬಕ್ಕೆ ಆಧಾರವಾಗಿದ್ದಾರೆ.

 ಈ ಅಪೂರ್ವ ಒಲಿಂಪಿಕ್ಸ್ ಸಾಧನೆಗಾಗಿ ಶಿರೋಮಣಿ ಅಕಾಲಿದಳ- ಬಿಜೆಪಿ ಸರ್ಕಾರ 15 ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿತ್ತು. ಅಂದಿನ ಸಿಎಂ ಪ್ರಕಾಶ್ ಸಿಂಗ್ ಬಾದಲ್ ಆತನನ್ನು ಸನ್ಮಾನಿಸಿ ಒಂದು ಲಕ್ಷ ರೂಪಾಯಿ ವಿಶೇಷ ಬಹುಮಾನ ಘೋಷಿಸಿದ್ದರು. ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ 10 ಲಕ್ಷ ರೂಪಾಯಿಗಳನ್ನು ಬಾಂಡ್ ರೂಪದಲ್ಲಿ ನೀಡಿತ್ತು. ಆದರೆ ಬಾಂಡ್‌ನ ಪರಿಪಕ್ವತಾ ಅವಧಿ ಆಗಿಲ್ಲ.

ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ವಿವರ ಪಡೆದುಕೊಂಡು ಅಗತ್ಯ ನೆರವನ್ನು ನೀಡಲು ತಮ್ಮ ಸರ್ಕಾರ ಬದ್ಧ ಎಂದು ಪಂಜಾಬ್ ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ರವೀನ್ ತುಕ್ರಲ್ ಹೇಳಿದ್ದಾರೆ. "ನನ್ನ ಮಗ ನನಗೆ ವಿಶೇಷ. ಸರ್ಕಾರಿ ಅಧಿಕಾರಿಗಳ ಉದಾಸೀನದಿಂದಾಗಿ ಆತನಿಗೆ ಅತೀವ ಬೇಸರ ಆಗಿದೆ" ಎಂದು ತಂದೆ ಬಲಬೀರ್ ಹೇಳುತ್ತಾರೆ. ನಾಲ್ಕು ಮಂದಿಯ ಕುಟುಂಬ ನಿರ್ವಹಣೆಗೆ ತಂದೆ ಮಗ ಕೂಲಿ ಕೆಲಸ ಮಾಡುವುದು ಅನಿವಾರ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News