ಉಡುಪಿ: ‘ಕ್ರಿಸ್ತ ಕಿರಣ’ ಕಿರುಚಿತ್ರ ಬಿಡುಗಡೆ
ಉಡುಪಿ, ಡಿ.26: ಶಂಕರಪುರ ಸಂತ ಯೋವಾನ್ನರ ಧರ್ಮ ಕೇಂದ್ರ ನಿರ್ಮಿಸಿ ರುವ ‘ಕ್ರಿಸ್ತ ಕಿರಣ’ ಕಿರುಚಿತ್ರದ ಬಿಡುಗಡೆ ಸಮಾರಂಭವು ಕ್ರಿಸ್ಮಸ್ ಹಬ್ಬದ ದಿನದಂದು ಜರಗಿತು.
ಕಿರುಚಿತ್ರವನ್ನು ಬಿಡುಗಡೆಗೊಳಿಸಿದ ಕಾಪು ಶಾಸಕ ವಿನಯ ಕುಮಾರ್ ಸೊರಕೆ ಮಾತನಾಡಿ, ಯೇಸುವಿನ ಪ್ರೀತಿ ಶಾಂತಿ ಮತ್ತು ಸಹಬಾಳ್ವೆಯ ಸಂದೇಶ ವನ್ನು ಸಾರುವ ಇಂತಹ ಚಿತ್ರಗಳಿಂದ ಸಮಾಜಕ್ಕೆ ಒಳಿತಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಧರ್ಮಕೇಂದ್ರದ ಪ್ರಧಾನ ಧರ್ಮಗುರುಗಳಾದ ವಂ. ಫರ್ಡಿನಂಡ್ ಗೊನ್ಸಾಲ್ವಿಸ್, ವಂ.ವಿನ್ಸೆಂಟ್ ಕುವೆಲ್ಹೊ, ವಂ.ಲೋರೆನ್ಸ್ ಮೆಂಡೋನ್ಸ, ಚಿತ್ರ ನಿರ್ಮಾಣಕ್ಕೆ ಸಹಕರಿಸಿದ ಬಿಗ್ ಜೆ ಟಿವಿ ಚಾನೆಲ್‌ನ ನಿರ್ದೇಶಕ ಪ್ರಶಾಂತ್ ಜತ್ತನ್ನ, ಮಾರ್ಕ್ ವಾಜ್, ಕ್ಲೇರಾ ಮೆಂಡೋನ್ಸಾ ಮೊದ ಲಾದವರು ಉಪಸ್ಥಿತರಿದ್ದರು.
30 ನಿಮಿಷಗಳ ಈ ಚಿತ್ರದಲ್ಲಿ ಸುಮಾರು 50ಕ್ಕೂ ಹೆಚ್ಚು ಕಲಾವಿದರು ನಟಿಸಿ ದ್ದಾರೆ. ಚಿತ್ರದಲ್ಲಿ ಎರಡು ಹಾಡು ಮತ್ತು ನೃತ್ಯಗಳಿವೆ. ಮಣಿಪುರ, ಕುಂಟಲ್ ನಗರ ಮತ್ತು ಕುಂಜಾರುಗಿರಿ ಪ್ರದೇಶದಲ್ಲಿ ಚಿತ್ರೀಕರಣ ನಡೆದಿದ್ದು, ಎಂಟು ದಿನಗಳಲ್ಲಿ ಚಿತ್ರೀಕರಣ ಪೂರ್ಣಗೊಳಿಸಲಾಗಿದೆ. ಈ ಚಿತ್ರ ಶೀಘ್ರದಲ್ಲಿ ಯೂ ಟ್ಯೂಬ್ ಚಾನೆಲ್‌ನಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ ಎಂದು ಚಿತ್ರದ ಕಥೆಯನ್ನು ರಚಿಸಿ ನಿರ್ದೇಶಿಸಿರುವ ಧರ್ಮಕೇಂದ್ರದ ಸಹಾಯಕ ಧರ್ಮಗುರು ವಂ. ರೊಯ್ಸನ್ ಫೆರ್ನಾಂಡಿಸ್ ತಿಳಿಸಿದ್ದಾರೆ.