ಸೈಂಟ್ ಆ್ಯಂಟನಿ ಪೂವರ್ ಹೋಂನಲ್ಲಿ ಕ್ರಿಸ್‌ಮಸ್ ಆಚರಣೆ
Update: 2017-12-26 17:28 IST
ಮಂಗಳೂರು, ಡಿ.26: ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಸೋಶಿಯಲ್ ಅಚೀವ್‌ಮೆಂಟ್ ಫಾರಂನ ಸದಸ್ಯರು ನಗರದ ವೆಲೆನ್ಸಿಯಾದಲ್ಲಿರುವ ಸೈಂಟ್ ಆ್ಯಂಟನಿ ಪೂವರ್ ಹೋಂ ಎಂಬ ಸಂಸ್ಥೆಗೆ ಭೇಟಿ ನೀಡಿ ಸಂಸ್ಥೆಯ ಫಾ. ಫ್ರಾನ್ಸಿಸ್‌ಡಿ ಸೋಜರವರಿಗೆ ಹೂಗುಚ್ಛ ನೀಡಿ ಕ್ರಿಸ್‌ಮಸ್ ಹಬ್ಬದ ಶುಭಾಶಯ ಕೋರಿದರು.
ಈ ಸಂದರ್ಭ ಮಾತನಾಡಿದ ಫಾ. ಫ್ರಾನ್ಸಿಸ್ ಡಿಸೋಜ ಹಬ್ಬ ಹರಿದಿನಗಳಲ್ಲಿ ಬೇರೆ ಬೇರೆ ಧರ್ಮೀಯರು ಪರಸ್ಪರ ಶುಭಾಶಯ ಕೋರಿ ಸಿಹಿತಿಂಡಿ ವಿತರಿಸುವ ಮೂಲಕ ಪರಸ್ಪರ ಸೌಹಾರ್ದ ಬೆಳೆಸಲು ಸಾಧ್ಯ ಎಂದರು.
ಸಂಘದ ಅಧ್ಯಕ್ಷ ನಾಸಿರ್ ಸಾಮಣಿಗೆ, ಸಂಚಾಲಕ, ನಿಯಾಝ್ ಸಾಮಣಿಗೆ, ಪತ್ರಕರ್ತ ಬಶೀರ್ ಕಲ್ಕಟ್ಟ, ನ್ಯಾಯವಾದಿ ಫೈಝಲ್, ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ ಖಲೀಲ್, ಸಂಘಟನಾ ಕಾರ್ಯದರ್ಶಿ ಅಬ್ದುಲ್ ಖಾದರ್ ಅಡ್ಕರೆ, ಉದ್ಯಮಿ ಅಜೀಂ ಕಂಕನಾಡಿ, ಮುಸ್ತಫಾ ಪಟ್ಲ, ಅಬ್ದುಲ್ ರಶೀದ್ ಮಂಜನಾಡಿ ಉಪಸ್ಥಿತರಿದ್ದರು.