×
Ad

‘ತುಳು ವಚನ ಅನುವಾದ ಸಂಪುಟ’ ಅನಾವರಣ

Update: 2017-12-26 19:37 IST

ಮಂಗಳೂರು, ಡಿ.26: ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಮತ್ತು ಬೆಂಗಳೂರು ಬಸವ ಸಮಿತಿ ಆಶ್ರಯದಲ್ಲಿ ತುಳು ಅಕಾಡಮಿಯ ಸಿರಿ ಚಾವಡಿಯಲ್ಲಿ ‘ತುಳು ವಚನ ಅನುವಾದ ಸಂಪುಟ’ದ ಅನಾವರಣ ಕಾರ್ಯಕ್ರಮವು ಮಂಗಳವಾರ ನಡೆಯಿತು.

ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ‘ತುಳು ಅತ್ಯಂತ ಸತ್ವಯುತವಾದ ಭಾಷೆಯಾಗಿದೆ. ತುಳುವಿನಲ್ಲಿ ಉತ್ತಮ ಗ್ರಂಥಗಳನ್ನು ಹೆಚ್ಚೆಚ್ಚು ಪ್ರಕಟಿಸುವುದರಿಂದ ಭಾಷೆಯ ಮಹತ್ವವೂ ಹೆಚ್ಚುತ್ತದೆ ಎಂದು ಹೇಳಿದರು.

 ತುಳುವಿನಲ್ಲಿ ಸಾಹಿತ್ಯ ರಚನೆಯ ಜೊತೆಗೆ ಕಲೆಯ ಪ್ರದರ್ಶನ ನಡೆಯುತ್ತಿರುವುದು ಕೂಡ ಉತ್ತಮ ಬೆಳವಣಿಗೆಯಾಗಿದೆ. ತುಳು ಯಕ್ಷಗಾನ ಪ್ರಸಂಗಗಳು ನಿರಂತರವಾಗಿ ಪ್ರದರ್ಶನಗೊಳ್ಳುತ್ತಿರುವುದು ತುಳು ಭಾಷೆಯ ಸೊಗಡನ್ನು ಸಾಂಸ್ಕೃತಿಕ ಲೋಕದಲ್ಲಿ ಪಸರಿಸುವಂತೆ ಮಾಡಿದೆ ಎಂದು ಡಾ. ಡಿ.ವೀರೇಂದ್ರ ಹೆಗ್ಗಡೆ ಪ್ರಶಂಸಿಸಿದರು.

ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಪುಟದ ಸಂಪಾದಕ ಡಾ. ಬಿ.ಎ. ವಿವೇಕ ರೈ ಗ್ರಂಥ ಪರಿಚಯ ಮಾಡಿದರು. ಅಕಾಡಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ., ಬಸವ ಸಮಿತಿ ಪ್ರಕಟನೆ ಮತ್ತು ಸಂಶೋಧನಾ ವಿಭಾಗದ ಸಂಚಾಲಕ ಎಸ್. ಐ. ಭಾವಿಕಟ್ಟಿ ಉಪಸ್ಥಿತರಿದ್ದರು. ಅಕಾಡಮಿಯ ಅಧ್ಯಕ್ಷ ಎ.ಸಿ. ಭಂಡಾರಿ ಸ್ವಾಗತಿಸಿದರು. ಬಿ.ಎಸ್.ದೇವಾಡಿಗ ವಂದಿಸಿದರು. ಎ.ಗೋಪಾಲ್ ಅಂಚನ್ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭ ಡಾ.ಡಿ. ವೀರೇಂದ್ರ ಹೆಗ್ಗಡೆ, ಅರವಿಂದ ಜತ್ತಿ, ಡಾ. ಬಿ. ಎ. ವಿವೇಕ ರೈ, ಎ. ಸಿ. ಭಂಡಾರಿ ಅವರನ್ನು ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News