×
Ad

ಭಟ್ಕಳ: ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿಹಬ್ಬ ಸಮಾರೋಪ ಸಮಾರಂಭ

Update: 2017-12-26 20:11 IST

ಭಟ್ಕಳ, ಡಿ. 26: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿಹಬ್ಬ ಸಮಾರೋಪ ಸಮಾರಂಭದಲ್ಲಿ ಭಟ್ಕಳ ಮೂಲದ ಪತ್ರಕರ್ತರಾದ ಆಫ್ತಾಬ್ ಹುಸೇನ್ ಕೋಲಾ, ವಿವೇಕ ಜಗನ್ನಾಥ ಮಹಾಲೆ ಹಾಗೂ ಟಿ.ವಿ ನಿರೂಪಕಿ ಶ್ವೇತಾ ಆಚಾಯರರ್ನ್ನು ಸನ್ಮಾನಿಸಿ ಗೌರವಿಸಲಾಯಿತು.

ಆಫ್ತಾಬ್ ಹುಸೇನ್ ಕೋಲಾ ಕಾರ್ಯನಿರತ ಪತ್ರಕರ್ತರ ಸಂಘದ ಸ್ಥಾಪಕ ಸದಸ್ಯರಾಗಿದ್ದು, ಭಟ್ಕಳದಲ್ಲಿ ಭಟ್ಕಳ್ ಟೈಮ್ಸ್ ಎಂಬ ಆಂಗ್ಲ ಪತ್ರಿಕೆಯೊಂದನ್ನು ಆರಂಭಿಸಿ ಅದನ್ನು ಯಶಸ್ವಿಯಾಗಿ ಮುನ್ನೆಡಿಸಿದ್ದು ನಂತರ ಒಮಾನ್ ದೇಶದ ಖ್ಯಾತ ಪತ್ರಿಕೆಯೊಂದರ ಸಂಪಾದಕರಾಗಿದ್ದು, ಸದ್ಯ ಪತ್ರಿಕೋದ್ಯಮದಿಂದ ದೂರ ಇರುವ ಅವರನ್ನು ಸಂಘದ ಬೆಳ್ಳಿಹಬ್ಬದ ಸಮಾರಂಭದಲ್ಲಿ ಸನ್ಮಾನಿಸುವುದರ ಮೂಲಕ ಅವರು ಪತ್ರಿಕೋಧ್ಯಮಕ್ಕೆ ನೀಡಿದ ಸೇವೆಯನ್ನು ಸ್ಮರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಮ್ಮ ಆರಂಭಿಕ ಪತ್ರಿಕೋಧ್ಯಮದ ದಿನಗಳನ್ನು ಮೆಲುಕು ಹಾಕಿದ್ದೂ, ಭಟ್ಕಳ ಪತ್ರಕರ್ತರ ಕಾರ್ಯವನ್ನು ಶ್ಲಾಘಿಸಿದರು.

ನಮ್ಮ ಭಟ್ಕಳ ದಿನಪತ್ರಿಕೆಯನ್ನು ಆರಂಭಿಸಿ ವಿವಿಧ ಪತ್ರಿಕೆಗಳಲ್ಲಿ ವರದಿಗಾರನಾಗಿ ಸೇವೆ ಸಲ್ಲಿಸಿ ಈಗ ಬೆಳಗಾವಿಯಲ್ಲಿ ದಿಗ್ವಿಜಯ ಚಾನೆಲ್ ಹಾಗೂ ವಿಜಯವಾಣಿ ಪತ್ರಿಕೆಯ ಸ್ಥಾನಿಕ ಸಂಪಾದಕರಾಗಿರುವ ವಿವೇಕ ಜಗನಾಥ್ ಮಹಾಲೆಯವರನ್ನು ಪತ್ರಿಕೋದ್ಯಮದಲ್ಲಿ ಮಾಡಿದ ಸಾಧನೆಗಾಗಿ ಸನ್ಮಾನಿಸಿ, ಗೌರವಿಸಲಾಯಿತು.

 ಈ ಸಂದರ್ಭದಲ್ಲಿ ಮಾತನಾಡಿದ ಅವರು ಪತ್ರಿಕೋದ್ಯಮಕ್ಕೆ ಬಂದಿರುವ ತಮ್ಮ ಆ ದಿನಗಳನ್ನು ಮೆಲಕು ಹಾಕುತ್ತಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಅಂದು ನೀಡಿದ ಸಹಾಯವನ್ನು ಸ್ಮರಿಸಿದರು. ಪ್ರತಿಯೋರ್ವ ವ್ಯಕ್ತಿಯೂ ಕೂಡಾ ಪ್ರಾಮಾಣಿಕತೆ, ಪರಿಶ್ರಮಗಳನ್ನು ಬೆಳೆಸಿಕೊಂಡಾಗ ಎಷ್ಟು ಎತ್ತರಕ್ಕೂ ಬೆಳೆಯಬಹುದು ಎಂದು ಹೇಳಿದ ಅವರು ಯುವಕರು ಈ ಎರಡು ರತ್ನಗಳನ್ನು ತಮ್ಮೊಂದಿಗೆ ಇಟ್ಟುಕೊಂಡರೆ ಯಶಸ್ಸು ಖಂಡಿತ ಎಂದರು.

ಮತ್ತೋರ್ವ ಭಟ್ಕಳದ ಪತ್ರಕರ್ತೆ ಶ್ವೇತಾ ಆಚಾರ್ಯ ಅವರನ್ನು ಪತ್ರಿಕೋದ್ಯಮದಲ್ಲಿ ಮಾಡಿದ ಸಾಧನೆಗಾಗಿ ಸನ್ಮಾನಿಸಿ, ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಅಳುಕಿನಿಂದಲೇ ತಾನು ಟಿ.ವಿ. ನಿರೂಪಕಿಯ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದೆ, ಆದರೆ ಆಯ್ಕೆಯಾಗಿದ್ದು, ನನಗೆ ಮಾತ್ರವಲ್ಲದೇ ಭಟ್ಕಳದ ಜನತೆಗೇ ಆಶ್ಷರ್ಯವಾಗಿದೆ ಎಂದರು. ಇಂದು ಟಿ.ವಿ. ಮಾಧ್ಯಮಕ್ಕಿಂತ ವೇಗವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಡುತ್ತಿದ್ದು ಸಮಾಜಕ್ಕೆ ಇದು ಮಾರಕವಾಗಿದೆ ಎಂದ ಅವರು ಜನತೆ ತಾಳ್ಮೆ ಕಳೆದುಕೊಳ್ಳಬಾರದು. ಯಾವುದೇ ಸುದ್ದಿಯ ನೈಜತೆಯನ್ನು ಮೊದಲು ಅರಿಯಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕ ಮಂಕಾಳ ವೈದ್ಯ, ಜಿ.ಪಂ. ಅಧ್ಯಕ್ಷ ಜಯಶ್ರೀ ಮೊಗೇರ, ಸಂಘದ ರಾಜ್ಯಾಧ್ಯಕ್ಷ ಎನ್. ರಾಜು, ಸಾಹಿತಿ ರಮ್ಜಾನ್ ದರ್ಗಾ, ಉಧ್ಯಮಿ ಶಿವಾನಿ ಶಾಂತಾರಾಮ್, ಜಿಲ್ಲಾಧ್ಯಕ್ಷ ಸುಬ್ರಾಯ ಭಟ್ಟ ಬಕ್ಕಳ, ತಂಝೀಮ್ ಅಧ್ಯಕ್ಷ ಮುಝಮ್ಮಿಲ್ ಖಾಜಿಯಾಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News