ಮೊಬೈಲ್ ಅಂಗಡಿಗೆ ನುಗ್ಗಿ ಕಳವು: ಆರೋಪಿಗಳ ಬಂಧನ
Update: 2017-12-26 20:43 IST
ಕೊಣಾಜೆ, ಡಿ. 26: ಕೊಣಾಜೆ ಠಾಣಾ ವ್ಯಾಪ್ತಿಯ ಮುಡಿಪುವಿನಲ್ಲಿ ಮೊಬೈಲ್ ಅಂಗಡಿಗೆ ನುಗ್ಗಿ ಕಳವು ನಡೆಸಿದ್ದ ಇಬ್ಬರು ಆರೋಪಿಗಳನ್ನು ಕೊಣಾಜೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಬಂಧಿತರನ್ನು ವರ್ಕಾಡಿ ಗ್ರಾಮದ ತಲೆಕ್ಕಿಯ ಝಿಯಾದ್ (19) ಹಾಗೂ ತಲೆಕ್ಕಿಯ ಮಹಮ್ಮದ್ ಅಶ್ರಫ್ ಯಾನೆ ಇರ್ಫಾನ್ (19) ಎಂದು ಗುರುತಿಸಲಾಗಿದೆ.
ಈ ಆರೋಪಿಗಳು ನ. 3ರಂದು ರಾತ್ರಿ ಮುಡಿಪುವಿನ ಮೊಬೈಲ್ ಅಂಗಡಿಗೆ ನುಗ್ಗಿ ಕಳ್ಳತನ ನಡೆಸಿದ್ದರು ಎಂದು ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಮಂಗಳವಾರ ಆರೋಪಿಗಳನ್ನು ಬಾಳೆಪುಣಿಯಲ್ಲಿ ಬಂಧಿಸಿ, ಬಂಧಿತರಿಂದ ಮೊಬೈಲ್ ಸೆಟ್‌ಗಳು ಹಾಗೂ ಬೈಕನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.